ವಿಧಾನಸಭಾ ಚುನಾವಣೆ ಘೋಷಣೆ ಹಿನ್ನೆಲೆ ಕಿತ್ತೂರು ಕ್ಷೇತ್ರದ ಚುನಾವಣಾ ಅಧಿಕಾರಿಗಳಿಂದ ಪತ್ರಿಕಾ ಗೋಷ್ಠಿ...👍
ಸ್ಥಳ : ಕಿತ್ತೂರು
ಹೌದು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಇಂದು ಆದೇಶ ಹೊರಬಿದ್ದ ಕಾರಣ ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸಹ ಚುನಾವಣೆ ಅಧಿಕಾರಿಗಳು ಆದ ರೇಷ್ಮಾ ಹಾನಗಲ್ ರವರು ಹಾಗೂ ತಂಡ ವಿವಿಧ ಪಕ್ಷಗಳು ಮುಖಂಡರು ಹಾಗೂ ಚುನಾವಣಾ ತಂಡದ ಸದಸ್ಯರ ಜೊತೆ ಚುನಾವಣೆಯನ್ನು ಯಶಸ್ವಿಯಾಗಿ ನಡೆಸುವುದಕ್ಕೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಪತ್ರಿಕಾ ಗೋಷ್ಠಿ ನಡೆಸಿ ವಿವರ ನೀಡಿದರು. ಇನ್ನೂ ರಾಜ್ಯ ವಿಧಾನಸಭಾ ಚುನಾವಣೆಯು 10-5-2023 ರಂದು ನಡೆಯಲಿದ್ದು, 13 -5-2023 ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಈ ಸಂದರ್ಭದಲ್ಲಿ ತಹಶೀಲ್ದಾರ್ ರವೀಂದ್ರ ಹಾದಿಮನಿ, ಸಿ.ಪಿ.ಐ ನಿತ್ಯಾನಂದ ಪಂಡಿತ್, ಕಲ್ಯಾಣ ಶೆಟ್ಟಿ, ಬಿ.ಇ. ಓ ಆರ್.ಟಿ ಬಳಿಗಾರ ಸೇರಿದಂತೆ ವಿವಿಧ ಚುನಾವಣಾ ಸಿಬ್ಬಂದಿ, ಕಿತ್ತೂರು ಕ್ಷೇತ್ರದ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 💐🙏ವಂದನೆಗಳು. ಶ್ರೀ ಬಸವರಾಜು. ರಾಜ್ಯ ವಿಶೇಷ ಪ್ರತಿನಿಧಿ. 6360224654
Tags
LOCAL NEWS