ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಲಕ್ಷ್ಮೇಶ್ವರ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಾರ್ಯಾಲಯ ಶಿರಟ್ಟಿ ಎಸ್ ಎಸ್ ಕೂಡ್ಲ ಮಠ ಮಾಧ್ಯಮಿಕ ಶಾಲೆ ಶಿಗ್ಲಿ ಇವುಗಳ ಸಯುಕ್ತ ಆಶ್ರಯದಲ್ಲಿ ಇಂದು ಬೇಸಿಗೆ ಶಿಬಿರ ಉದ್ಘಾಟನಾ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪಾಧ್ಯಕ್ಷರಾದ ಶ್ರೀ ವೀರಣ್ಣ ಎಚ್ ಪವಾಡದ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಹಾಗೂ ಸಿಬಿರದ ಸಂಪುನ್ಮೂಲ ವ್ಯಕ್ತಿಗಳಾಗಿ ಕಾರ್ಯದರ್ಶಿಗಳಾದ ಶ್ರೀ ಕೆ ಆರ್ ಲಮಾಣಿ ಶ್ರೀ ಡಿ ಆರ್ ಗೋಂದಕರ ಶ್ರೀ ಎಸ್ಎಂ ಮುಳಗುಂದ ಉಪಸ್ಥಿತರಿದ್ದರು ಈ ಶಿಬಿರದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು ಸಿಬಿರದ ಉದ್ಘಾಟನೆಯನ್ನು ಮಾಡಿ ಶ್ರೀ ವೀರಣ್ಣ ಎಚ್ ಪವಾಡ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು ಮತ್ತು ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ಯದರ್ಶಿಗಳಾದ ಶ್ರೀ ಕೆ ಆರ್ ಲಮಾಣಿ ಅವರು ಬೇಸಿಗೆಯಲ್ಲಿ ನಡೆಯುತ್ತಿರುವ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಬೇಸಿಗೆಯ ಶಿಬಿರವು ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯುಕ್ತವಾಗಿ ಬೇಸಿಗೆಯ ಸಮಯವನ್ನು ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವ ಮುಖಾಂತರ ಹೊರ ಸಂಚಾರ ಮಾಡುವುದರಿಂದ ಅದರಲ್ಲಿ ಆಗುವ ಅನುಭವ ಅಂದರೆ ಟ್ರ್ಯಾಕಿಂಗ್ ಐದು ಕಿಲೋಮೀಟರ್ ನಡಿಗೆ ಅದರಲ್ಲಿ ಸಹಿಸ್ಕೋಬಹುದಾದ ಕಷ್ಟ ಸಹಿಷ್ಣತೆ ತಾಳ್ಮೆ ಪರಿಸರ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳುತ್ತಾರೆ ಈ ರೀತಿಯಾಗಿ ಶಿಸ್ತು ಬದ್ಧವಾದ ಜೀವನವನ್ನು ಸಾಗಿಸಲು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ ಎಂದು ತಿಳಿಸಿದರು ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸುವುದು ಸ್ವಚ್ಛತೆ ಸಮಾಜ ಸೇವೆ ಗಳಂತಹ ಮುಂತಾದ ಕೌಸಲ್ಯಗಳನ್ನು ಸ್ಕೌಟ್ಸ್ ಮತ್ತು ಗೇಟ್ಸ್ ನಿಂದ ತಿಳಿದುಕೊಳ್ಳುತ್ತಾರೆ ಅಷ್ಟೇ ಅಲ್ಲದೆ ನಾಯಕತ್ವದ ಗುಣಗಳನ್ನು ಸ್ವಾಭಿಮಾನಿಯಾಗಿ ಬದುಕಲು ಉದಾಹರಣೆಗೆ ಅಡುಗೆ ಮಾಡುವ ಕೌಶಲಗಳು ಗುಡ್ಡ ಬೆಟ್ಟ ಏರುವ ಕೌಶಲ್ಯಗಳು ನದಿ ದಾಟುವ ಕೌಶಲ್ಯಗಳು ಮುಂತಾದವುಗಳು ಜೀವನದಲ್ಲಿ ಮತ್ತೊಬ್ಬರ ಮೇಲೆ ಅವಲಂಬನೆ ಇಲ್ಲದೆ ಧೈರ್ಯ ಸಾಹಸ ಗಳ ಜೀವನ ನಡೆಸುವುದೇ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಬರುವ ವಿಷಯವಾಗಿದೆ ಆದ್ದರಿಂದ ಇಂತಹ ಶಿಬಿರವನ್ನು ಆ ಯೋಜನೆ ಮಾಡುವ ಮುಖಾಂತರ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಆದ್ದರಿಂದ ಇಂತಹ ಶಿಬಿರದ ಸದಿಯೋಪಿಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದರು ಈ ಸಂದರ್ಭದಲ್ಲಿ ಶ್ರೀ ಎಸ್ಎಂ ಮುಳುಗುಂದ ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಬರುವ ನೆಯಮ ಪ್ರತಿಜ್ಞೆ ಗಳ ಬಗ್ಗೆ ಸಹ ವಿಸ್ತಾರವಾಗಿ ತಿಳಿಸಿದರು ಶ್ರೀ ಡಿ ಆರ್ ಗೋಂದಕರ ವಿದ್ಯಾರ್ಥಿಗಳನ್ನು ಕುರಿತು ಸ್ಕೌಟ್ಸ್ ಮತ್ತು ಗೈಡ್ಸ್ ಗಳಲ್ಲಿ ಪಾಲ್ಗೊಳ್ಳುವುದರಿಂದ ಇದರ ಲಾಭ ಉಪಯುಕ್ತದ ಬಗ್ಗೆ ಮಾತನಾಡಿದರು ಈ ಶಿಬಿರದಲ್ಲಿ ಎಸ್ ಎಸ್ ಕುಡ್ಲಮಠ ಮಾಧ್ಯಮಿಕ ಶಾಲೆ ಶಿಗ್ಲಿ ಶ್ರೀಮತಿ ಜಾನಕಿ ಬಾಯಿ ಪ್ರಾಥಮಿಕ ಶಾಲೆ ಶಿಗ್ಲಿ ಜಿ ಬಿ ಎಸ್ ಎಸ್ ಪ್ರಾಥಮಿಕ ಶಾಲೆ ಶಿಗ್ಲಿ ಎಸ್ ಎಸ್ ಕೂಡಲಮಠ ಆಂಗ್ಲ ಮಾಧ್ಯಮ ಶಾಲೆ ಶಿಗ್ಲಿ ಕೆ ಜಿ ಬದಿ ಸರಕಾರಿ ಪ್ರಾಥಮಿಕ ಶಾಲೆ ಶಿಗ್ಲಿ ಹಾಗೂ ಶಿಗ್ಲಿಯ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು ವಿದ್ಯಾರ್ಥಿಗಳಲ್ಲಿ ನಾಲ್ಕು ಗುಂಪುಗಳನ್ನಾಗಿ ವಿಂಗಡಣೆ ಮಾಡಿ ಪ್ರತಿ ಗುಂಪಿಗೆ ಪ್ರತ್ಯೇಕ ಹೆಸರುಗಳನ್ನು ನೀಡಲಾಯಿತು ಸ್ಕೌಟ್ಸ್ ಗಳ ಗುಂಪಿಗೆ ಕುದುರೆ ಹುಲಿ ಚಿರತೆ ಆಕಳು ಗೈಡ್ಸ್ಗಳ ಗುಂಪಿಗೆ ಕೋಗಿಲೆ ನವಿಲು ಗಿಳಿ ಹೌಸ ಪಕ್ಷಿ ಗಳೆಂದು ಹೆಸರು ನೀಡಲಾಯಿತುಈ ಕಾರ್ಯಕ್ರಮವು ಪ್ರಾರ್ಥನೆ ಸ್ವಾಗತ ದೊಂದಿಗೆ ಪ್ರಾರಂಭ ಮಾಡಿ ವಂದನಾರ್ಪಣೆಯನ್ನು ಶ್ರೀ ಡಿ ಆರ್ ಗೋಂದಕರ ನಿರೂಪಣೆಯನ್ನು ಶ್ರೀ ಎಸ್ಎಂ ಮುಳುಗುಂದ ನಿರ್ವಹಿಸಿದರು
Tags
LOCAL NEWS