ಗಣರಾಜ್ಯೋತ್ಸವ ನಿಮಿತ್ಯ ನೇಗಿನಹಾಳ ಗ್ರಾಮದ ಮಾಜಿ ಸೈನಿಕರಿಂದ ಸ್ಮಶಾನ ಸ್ವಚ್ಛತೆ ಕಾರ್ಯಕ್ರಮ.


 ಹೌದು ಬೆಳಗಾವಿ ಜಿಲ್ಲೆಯ ಕಿತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನೇಗಿನಹಾಳ ಗ್ರಾಮದ ಮಾಜಿ ಸೈನಿಕರ ಸಂಘದ ಸದಸ್ಯರು ಗಣ ರಾಜ್ಯೋತ್ಸವದ ನಿಮಿತ್ಯ ಇಂದು ಗ್ರಾಮದ ಹೊರ ವಲಯದಲ್ಲಿನ ಸ್ಮಶಾನ ಸ್ವಚ್ಛತೆ ಮಾಡಿ ಅದರ ಸಂರಕ್ಷಣೆಗೆ ಪಣ ತೊಟ್ಟರು, ಈ ಸಂದರ್ಭದಲ್ಲಿ ಇವರ ಶ್ರಮದಾನಕ್ಕೆ ಸಾಥ್ ಕೊಟ್ಟ ಕಾಂಗ್ರೆಸ್ ಮುಖಂಡರು ಹಾಗೂ kpcc ಸದಸ್ಯರು ಆದ ಶ್ರೀಮತಿ ರೋಹಿಣಿ ಬಾಬಾ ಸಾಹೇಬ್ ಪಾಟೀಲ್ ಅವರು ನಮ್ಮ ನ್ಯೂಸ್ ಸಮೂಹದ ರಾಜ್ಯ ವಿಶೇಷ ಪ್ರತಿನಿಧಿ ಬಸವರಾಜು ಅವರೊಂದಿಗೆ ಮಾತನಾಡಿ  "ಮಾಜಿ ಸೈನಿಕರಿಗೆ ಬೇಕಾದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು" ಇದೇ ಸಂದರ್ಭದಲ್ಲಿ ಇವರ ಸ್ವಚ್ಛತಾ ಕಾರ್ಯಕ್ಕೆ ರೋಹಿಣಿ ಬಾಬಾ ಸಾಹೇಬ್ ಪಾಟೀಲ್ ಅವರು ಸಹ ಸಾಥ್ ಕೊಟ್ಟರು. ಈ ಮಾಜಿ ಸೈನಿಕ ಹಾಗೂ ನಿವೃತ್ತ ಶಿಕ್ಷಕರು ಆದ ಪುಂಡಲೀಕ ಹಾರೋಗೋಪ್ಪ ಮಾತನಾಡಿದರು, ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಜಿತ್ ಜೈನರ್, ನಾರಾಯಣ ಲೋಕರಿ, ಖಚಾಂಜಿ ಪುಂಡಲೀಕ ಇಂಗಳಗಿ, ಗಂಗಪ್ಪ ಜುಂಜ್ರಿ, ಬಸವರಾಜು ತಲ್ಲೂರು ಸೇರಿದಂತೆ 30 ಕ್ಕೂ ಹೆಚ್ಚು ಮಾಜಿ ಸೈನಿಕರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಮ್ಮ ನ್ಯೂಸ್ ಸಮೂಹದ ರಾಜ್ಯ ವಿಶೇಷ ಪ್ರತಿನಿಧಿ ಬಸವರಾಜು ಹಾಗೂ ನೇಗಿನಹಾಳ ಹೋರಾಟಗಾರ ರವಿ ಅಂಗಡಿ ಯವರನ್ನು ಸನ್ಮಾನ ಮಾಡಲಾಯಿತು

Post a Comment

Previous Post Next Post

Contact Form