ಮೋದಿಗೆ ಯಾರೂ ಸರಿಸಾಟಿಯಿಲ್ಲ ಎಂದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ: ಶೋಕಾಸ್ ನೋಟಿಸ್ ಜಾರಿ


 

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಚಾರ ವೈಖರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಗಮನಿಸಿದಾಗ, ಅವರಿಗೆ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅಥವಾ ಯಾರೊಬ್ಬರೂ ಸರಿಸಾಟಿ ಆಗುವುದಿಲ್ಲ ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಹೇಳಿದ್ದಾರೆ. ಈ ಸಂಬಂಧ ತಮಿಳುನಾಡು ಕಾಂಗ್ರೆಸ್ ಸಮಿತಿ ಶೋಕಾಸ್ ನೋಟಿಸ್ ನೀಡಿದೆ.


ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಹುಲ್ ಗಾಂಧಿ ಮಾತ್ರವಲ್ಲ, ಯಾರೂ ಸರಿಸಾಟಿಯಲ್ಲ ಎಂಬ ಹೇಳಿಕೆ ಮೂಲಕ ಪಕ್ಷದ ನಾಯಕರನ್ನು ಕೆರಳಿಸಿರುವ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರ ಮಗ ಹಾಗೂ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರಿಗೆ ತಮಿಳುನಾಡು ಕಾಂಗ್ರೆಸ್ ಸಮಿತಿ (ಟಿಎನ್‌ಸಿಸಿ) ಶೋಕಾಸ್ ನೋಟಿಸ್ ನೀಡಿದೆ.

ಕಾರ್ತಿ ಅವರ ಹೇಳಿಕೆ ವಿವಾದ ಸೃಷ್ಟಿಸುತ್ತಿರುವಂತೆಯೇ, ಅವರಿಗೆ ನೋಟಿಸ್ ನೀಡುವ ಟಿಎನ್‌ಸಿಸಿ ಅಧಿಕಾರದ ಕುರಿತಾದ ಪ್ರಶ್ನೆ ಕೂಡ ಚರ್ಚೆಗೆ ಆಸ್ಪದ ನೀಡಿದೆ. ಪಕ್ಷದ ನಾಯಕತ್ವದ ಕಡೆಗಿನ ಟೀಕೆ ಹಾಗೂ ಆಂತರಿಕ ಕಿತ್ತಾಟವನ್ನು ಇದು ಬಹಿರಂಗಪಡಿಸಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಸದಸ್ಯರಾಗಿರುವ ಕಾರ್ತಿ ಚಿದಂಬರಂ ಅವರಿಗೆ ನೋಟಿಸ್ ನೀಡಲು ಟಿಎನ್‌ಸಿಸಿಗೆ ಅಧಿಕಾರ ಇಲ್ಲ ಎಂದು ಹೇಳಲಾಗುತ್ತಿದೆ.

ತಮಿಳು ಸುದ್ದಿ ವಾಹಿನಿಯೊಂದಕ್ಕೆ ಕಾರ್ತಿ ಚಿದಂಬರಂ ಅವರು ಇತ್ತೀಚೆಗೆ ನೀಡಿದ್ದ ಸಂದರ್ಶನದಲ್ಲಿ ಕಾಂಗ್ರೆಸ್ ನಾಯಕತ್ವವನ್ನು ಟೀಕಿಸಿದ್ದರ ಜತೆಗೆ, ಪ್ರಧಾನಿ ನರೇಂದ್ರ ಮೋದಿ ಅವರ ಸಾಮರ್ಥ್ಯವನ್ನು ಶ್ಲಾಘಿಸಿರುವುದು ಪಕ್ಷದ ಶಿಸ್ತು ಸಮಿತಿ ಕೆಂಗಣ್ಣಿಗೆ ಗುರಿಯಾಗಿದೆ. ಶೋಕಾಸ್ ನೋಟಿಸ್‌ನಲ್ಲಿರುವ ವಿವರಗಳನ್ನು ಬಹಿರಂಗಪಡಿಸಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರಿಗೆ ಪ್ರತಿ ಸವಾಲು ಹಾಕುವುದು ಕಷ್ಟಕರ ಎಂದು ಕಾರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಗೆ ಸವಾಲು ಹಾಕಬಲ್ಲರೇ ಎಂಬ ಪ್ರಶ್ನೆಗೆ, ಮೋದಿ ಅವರಿಗೆ ಯಾರನ್ನೂ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದಿದ್ದರು.

"ಇಂದಿನ ಪ್ರಚಾರದ ವಾಸ್ತವಿಕತೆಯಲ್ಲಿ, ಮೋದಿ ಅವರಿಗೆ ಯಾರನ್ನೂ ಹೋಲಿಸುವುದು ಸಾಧ್ಯವಿಲ್ಲ" ಎಂದು ಕಾರ್ತಿ ಹೇಳಿದ್ದರು. ರಾಹುಲ್ ಗಾಂಧಿ ಸಾಟಿಯಾಗುತ್ತಾರೆಯೇ ಎಂಬ ಪ್ರಶ್ನೆಗೆ 'ಕಷ್ಟ' ಎಂದು ಉತ್ತರಿಸಿದ್ದರು. "ಮುಖಾ ಮುಖಿ ಪಂದ್ಯದಲ್ಲಿ, ಜನಪ್ರಿಯತೆ ವಿಚಾರವನ್ನು ಪರಿಗಣಿಸಿ, ಪ್ರಧಾನಿಯಾಗಿ ನರೇಂದ್ರ ಮೋದಿ ಅವರ ಸ್ವಾಭಾವಿಕ ಅನುಕೂಲತೆಯನ್ನು ಗಮನಿಸಿದಾಗ ಇದು ಕಷ್ಟಕರ ಎಂದಿದ್ದರು.

Post a Comment

Previous Post Next Post

Contact Form