ಸತೀಶ್ ಜಾರಕಿಹೊಳಿಯವರು ಕಿತ್ತೂರು ಪಟ್ಟಣದ ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ನೆರವೇರಿಸ...


ಹೌದು ಬೆಳಗಾವಿ ಜಿಲ್ಲೆಯ ಚನ್ನಮ್ಮ ಕಿತ್ತೂರು ಕ್ಷೇತ್ರದ ಪ್ರಮುಖ ಪಟ್ಟಣ ಕಿತ್ತೂರು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಆದ ಸತೀಶ್ ಜಾರಕಿಹೊಳಿಯವರು ಇಂದು ಕಿತ್ತೂರು ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕಿತ್ತೂರು ಪಟ್ಟಣದ ಕೆರೆಯ ದಂಡೆಯಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಟ್ರೀ ಪಾರ್ಕ್, ಕಿತ್ತೂರು ಪಟ್ಟಣದ ಪ್ರಮುಖ ರಸ್ತೆ ಅಗಲೀಕರಣ ಮಾಡಿ ಅಭಿವೃದ್ಧಿ ಪಡಿಸಿ ಎರಡು ಬದಿಗಳಲ್ಲಿ ಚರಂಡಿ ನಿರ್ಮಾಣ ಮಾಡುವುದು ಹಾಗೂ ಶಾಸಕರ ಕಚೇರಿ ಉದ್ಘಾಟನೆ ಹೀಗೆ ಹಲವು ಕಾಮಗಾರಿಗಳಿಗೆ ಚಾಲನೆ ಕೊಟ್ಟ ಸಚಿವ ಸತೀಶ್ ಜಾರಕಿಹೊಳಿ  ಯುವ ಶಾಸಕರು ಯಾವ ರೀತಿ ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ಬಾಬಾ ಸಾಹೇಬ್ ಪಾಟೀಲ್, ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಹಾಗೂ ಕಿತ್ತೂರು ರಾಜಗುರು ಸಂಸ್ಥಾನದ ಶ್ರೀ ಮಡಿವಾಳ ರಾಜ ಯೋಗಿನ್ದ್ರ ಸ್ವಾಮೀಜಿ, ಲೋಕೋಪಯೋಗಿ ಇಲಾಖೆ ಕಾರ್ಯ ನಿರ್ವಾಹಕ ಅಭಿಯಂತರರು ಎಸ್.ಎಸ್ ಸೊಬರದ್,  ಹಾಗೂ ಬ್ಲಾಕ್ ಅಧ್ಯಕ್ಷರು ಆದ ಸಂಗನಗೌಡ ಪಾಟೀಲ್, ನಿಂಗಪ್ಪ ಅರಕೇರಿ, ಮುದುಕಪ್ಪ ಮರಡಿ, ನಾನಾ ಸಾಹೇಬ್ ಪಾಟೀಲ್, ಸಿ.ಬಿ ಪಾಟೀಲ್, ಸುನಿಲ್ ಗಿವಾರಿ, ರಾಜಾ ಸಲೀಮ್ ಕಾಸಿಂನವರ್, ಅನಿಲ್ ಎಮ್ಮಿ, ಹಬೀಬ್ ಶಿಲೆದಾರ, ಎಂಫ್ ಜಕಾತಿ ಹಾಗೂ ಲಕ್ಷ್ಮಣ ಎಮ್ಮಿ, ಸಾವಂತ್ ಕಿರಬನವರ್, ರಮೇಶ್ ಮೊಕಾಶಿ ಸೇರಿದಂತೆ ಎಲ್ಲಾ ಕಾರ್ಯಕರ್ತರು ಸೇರಿದಂತೆ ಪಟ್ಟಣದ ಜನತೆ ಉಪಸ್ಥಿತರಿದ್ದರು. ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಕೇಳಿದ ಪ್ರಶ್ನೆಗಳಾದ ಬೆಳಗಾವಿ ಜಿಲ್ಲೆಯ ಕಾರ್ಯಕರ್ತರಿಗೆ ನಿಗಮ ಮಂಡಳಿ ಹುದ್ದೆ ಸಿಗದೇ ಇರುವುದು ಹಾಗೂ ಮಾಜಿ ಶಾಸಕಿ ಅಂಜಲಿ ನಿಂಬಾಲ್ಕರ್ ರವರಿಗೆ ಸಂಸದ ಅನಂತ್ ಕುಮಾರ್ ಹೆಗ್ಡೆ ರಿಜೆಕ್ಟೆಡ್ ಮೆಟೀರಿಯಲ್ ಎಂಬ ಪದ ಬಳಕೆಗೆ ಪ್ರತಿಕ್ರಿಯೆಯನ್ನು ನೀಡಿದರು.  ಒಟ್ಟಾರೆ ಐತಿಹಾಸಿಕ ಕಿತ್ತೂರು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟು ಕೆಲಸ ಮಾಡುತ್ತಿರುವುದು ಕಿತ್ತೂರು ಪಟ್ಟಣಕ್ಕೆ ಸಿಕ್ಕ ಹೊಸ ಮೈಲುಗಲ್ಲು ಎಂದು ಹೇಳಬಹುದು. 

Post a Comment

Previous Post Next Post

Contact Form