ಶ್ರೀ ರೇಣುಕಚಾರ್ಯರ ಜಯಂತಿ
22-03-2024
ವಿಂಜೃಂಬನೆಯಿಂದ ಜರುಗಿತು
ಶಿಗ್ಲಿಯ ಶ್ರೀಯುತ ವೀರಣ್ಣ ಹಾಲಪ್ಪ ಪವಾಡದ ಮಾತನಾಡಿದರು.
ಮಲಯಾಚಲ ನಿಸರ್ಗ ರಮ್ಯ ಸ್ಥಾನದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರ ಸಿಂಹಾಸನವನ್ನು ಸಂಸ್ಥಾಪಿಸಿ ಲೋಕ ಮಹಾಮುನಿ ಅಗಸ್ಯರಿಗೆ ಶಿವಾದ್ಯತ ಸಿದ್ಧಾಂತವನ್ನು ಬೋಧಿಸಿ ಉದ್ಧರಿಸಿದರು. ಜಾತಿ ಕಲ್ಯಾಣವನ್ನುಂಟು ಮಾಡಿದರು. ಮತ ಪಂಥಗಳ ಗಡಿ ಮೀರಿ ಸಾಮಾಜಿಕ ಸತ್ಕಾಂತಿಗೈದ ಪರಮಾಚಾರ್ಯರು, ಅಂಥ ಮಹಿಮಾನ್ವಿತರ ಅವತಾರದ ದಿನ ಫಾಲ್ಗುಣ ಶುದ್ಧ ತ್ರಯೋದಶಿ, ಮಾರ್ಚ 22ರಂದು ಶುಕ್ರವಾರ ಶ್ರೀ ಪೀಠದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಅಂದೇ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾ ರಥೋತ್ಸವ ಜರುಗುವುದೊಂದು ವಿಶಿಷ್ಟತೆ. ಇದರ ಅಂಗವಾಗಿ ಮಾರ್ಚ 20 ರಿಂದ 26 ರ ವರೆಗೆ ಶ್ರೀ ಪೀಠದ ಪವಿತ್ರ ಸಂಪ್ರದಾಯ ಪರಂಪರೆಯನ್ನು ಅನುಸರಿಸಿ ಎಲ್ಲಾ ಕಾರ್ಯಕ್ರಮಗಳು ಜರುಗುತ್ತವೆ. ಈ ಅಪೂರ್ವ ಅರ್ಥಪೂರ್ಣವಾದ ಸಮಾರಂಭಕ್ಕೆ ಅನೇಕ ಮಠಾಧೀಶರು ಮತ್ತು ರಾಜಕೀಯ ಧುರೀಣರು ಆಗಮಿಸಲಿದ್ದಾರೆ. ಹಲವಾರು ಹೊಸ ಹೊಸ ಯೋಜನೆಗಳಿಗೆ ಚಾಲನೆಯನ್ನು ಕೊಡುವ ಸತ್ಯ ಸಂಕಲ್ಪ ನಮ್ಮದಾಗಿದೆ. ಸಕಲ ಸದ್ಭಕ್ತ ಸಮುದಾಯ ಶಾಸನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಹಾ ಗುರುವಿನ ಕಾರುಣ್ಯಕ್ಕೆ ಪಾತ್ರರಾಗಿರಿ.. ಶ್ರೀಮತಿ ನಿಮ೯ಲಾದೇವಿ ವೀರಣ್ಣ ಪವಾಡದ .ಲಾವಣ್ಯ ಅನ್ನದಾನೇಶ್ವರ ಪವಾಡದ.ಲಕ್ಷ್ಮಿ ವೀರಸೋಮೇಶ್ವರ ಪವಾಡದ. ನಮ್ರತಾ. ಶಿವಯೋಗರಾಜ.ವಿಜಯವೀಣಾ.