120 ಅಡಿ ಉದ್ದದ ತೇರು ನಿಯಂತ್ರಣ ತಪ್ಪಿ ನೆಲಕ್ಕೆ ಉರುಳಿ ಬಿದ್ದಿರುವ ಘಟನೆ.


 

ಆನೇಕಲ್: ಬರೋಬ್ಬರಿ 120 ಅಡಿ ಉದ್ದದ ತೇರು ನಿಯಂತ್ರಣ ತಪ್ಪಿ ನೆಲಕ್ಕೆ ಉರುಳಿ ಬಿದ್ದಿರುವ ಘಟನೆ ಆನೇಕಲ್ʼನ ಹೀಲಲಿಗೆ ಗ್ರಾಮದಲ್ಲಿ ನಡೆದಿದೆ. 3 ವರ್ಷಕ್ಕೊಮ್ಮೆ ಹುಸ್ಕೂರು ಮದ್ದೂರಮ್ಮ ಜಾತ್ರಾ ಮಹೋತ್ಸವ ನಡೆಸಲಾಗುತ್ತದೆ. ಕಳೆದ 5 ವರ್ಷಗಳ ಹಿಂದೆ 2019ರಲ್ಲಿ ಈ ಜಾತ್ರೆ ನಡೆದಿತ್ತು. ಈ ಜಾತ್ರೆಗೆ ಹುಸ್ಕೂರಿನ ಮದ್ದೂರಮ್ಮ ಜಾತ್ರೆಗೆ ತೇರು ಬರುವುದು ವಾಡಿಕೆ. ಹೀಲಲಿಗೆ ಗ್ರಾಮದಿಂದ 120 ಅಡಿ ಉದ್ದದ ತೇರು ಹುಸ್ಕೂರಿಗೆ ಬರುತ್ತಿತ್ತು. ಸುತ್ತಮುತ್ತಲಿನ 7 ಹಳ್ಳಿಗಳಿಂದ ಗ್ರಾಮಸ್ಥರು ತೇರು ಕಟ್ಟುತ್ತಾರೆ. ತಮ್ಮ ತಮ್ಮ ಊರುಗಳಿಂದ ತೇರನ್ನ ಕಟ್ಟಿ ಟ್ರ್ಯಾಕ್ಟರ್‌ ಮೂಲಕ ಹುಸ್ಕೂರಿನ ಮದ್ದೂರಮ್ಮ ತರುತ್ತಾರೆ. ಹೀಗಲಿಗೆ, ಗೂಳವಾಡಿ, ಕೊಡತಿ, ರಾಮಸಂದ್ರ, ಇಗಲೂರು, ಸೀಗೆನ ಅಗ್ರಹಾರ, ದೊಡ್ಡನಾಗಮಂಗಲ ಗ್ರಾಮಗಳಿಂದ ತೇರನ್ನ ಕರೆತರಲಾಗತ್ತದೆ. ಕಳೆದೊಂದು ತಿಂಗಳಿನಿಂದ ಹತ್ತು ಲಕ್ಷ ಖರ್ಚು ಮಾಡಿ ತಯಾರಿಸಿದ್ದ ಈಗಲಿಗೆ ಕುರ್ಜು ತೇರು ಇದಾಗಿತ್ತು. ಈ ಬಾರಿಯೂ ಕೂಡ ಡಾಂಬರು ರಸ್ತೆಯಿಂದ ತೇರನ್ನ ಮಣ್ಣಿನ ರಸ್ತೆಗೆ ಇಳಿಸುತ್ತಿದ್ದಂತೆ ತೇರಿನ ಚಕ್ರ ಒಂದು ಕಡೆ ವಾಲಿ ತೇರು ಕೆಳಗೆ ಉರುಳಿ ಬಿದ್ದಿದೆ. ಸದ್ಯ ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

Post a Comment

Previous Post Next Post

Contact Form