ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿಗೆ ಸಿನಿಮಾ ಅಂದ್ರೆ ಸಖತ್ ಕ್ರೇಜ್ ಅನ್ಸುತ್ತೆ. ಕ್ರಿಕೆಟ್ ನಿಂದ ನಿವೃತ್ತಿ ಆದ ಬಳಿಕ ತಮ್ಮದೆ ಆದ ಸಂಸ್ಥೆಯೊಂದನ್ನ ಸ್ಥಾಪಿಸಿರುವ ಎಂ ಎಸ್ ಧೋನಿ, “ಧೋನಿ ಎಂಟರ್‌ಟೈನ್ಮೆಂಟ್” ಪ್ರೊಡಕ್ಷನ್ ಹೌಸ್ ನಿಂದ ಶೀಘ್ರವೇ ಕನ್ನಡ ಸಿನಿಮಾವೊಂದು ಸೆಟ್ಟೇರಲಿದೆಯಂತೆ. ಇಂತಹ ಸುದ್ದಿಯೊಂದು ಧೋನಿ ಸಂಸ್ಥೆಯ ಮೂಲಗಳಿಂದಲೇ ಹೊರಬಂದಿದೆ.ಈ ಥ್ರಿಲ್ಲಿಂಗ್ ನ್ಯೂಸ್ ಕೇಳಿ..ಕನ್ನಡಿಗರಂತೂ ಸಖತ್ ಖುಷಿ ಆಗಿದ್ದಾರೆ.
ಈಗಾಗಲೇ ತಮಿಳಿನಲ್ಲಿ ತಮ್ಮ ಮೊದಲ ಸಿನಿಮಾ ‘ಲೆಟ್ಸ್ ಗೆಟ್ ಮ್ಯಾರೀಡ್’ ಸಿನಿಮಾ ರಿಲೀಸ್ ಮಾಡಿದರು.ಆದರೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ತಮಿಳು ಆಡಿಯನ್ಸ್ ಗಳಿಗೆ ತಲುಪಿಲ್ಲ. ಹೀಗಾಗಿ ಚಂದನವನದ ಕಡೆ ಮುಖ ಮಾಡಿರುವ ಧೋನಿ, ಶೀಘ್ರದಲ್ಲೇ ಕನ್ನಡ ಸಿನಿಮಾವೊಂದನ್ನ ನಿರ್ಮಾಣ ಮಾಡುವುದು ಪಕ್ಕಾ ಆಗಿದೆ