ಅದ್ದೂರಿಯಾಗಿ ಸಂಪನ್ನಗೊಂಡ ಐತಿಹಾಸಿಕ ವೀರಾಪುರ ಗ್ರಾಮ ದೇವತೆ ಸತ್ಯಮ್ಮ ದೇವಿಯ ಜಾತ್ರೋತ್ಸವ....

ಹೌದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಮಲಪ್ರಭಾ ನದಿ ದಂಡೆಯ ಐತಿಹಾಸಿಕ ಗ್ರಾಮ ವೀರಾಪುರದ ಗ್ರಾಮ ದೇವತೆ ಶ್ರೀ ಸತ್ಯಮ್ಮ ದೇವಿಯ ಜಾತ್ರಾ ಮಹೋತ್ಸವವು ವಿವಿಧ ಪೂಜ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ, ಶ್ರೀ ಸತ್ಯಮ್ಮ ದೇವಿ ಟ್ರಸ್ಟ್ ಕಮಿಟಿ ಅಧ್ಯಕ್ಷರಾದ ಬಸನಗೌಡ ನಂದಿಹಳ್ಳಿ ಹಾಗೂ ವೀರಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಂಗಪ್ಪ ಪಿಶೆಣ್ಣನವರ್  ನೇತೃತ್ವದಲ್ಲಿ, ಗ್ರಾಮದ ಹಿರಿಯ ಮುಖಂಡರಾದ ಸಿದ್ದರಾಮಯ್ಯ ಹಿರೇಮಠರವರ ವಿಶೇಷ ಮಾರ್ಗದರ್ಶನದಲ್ಲಿ,  ಹಿರಿಯರಾದ ದುಂಡಪ್ಪ ಅಂಬಡಗಟ್ಟಿ, ಶಿವಾನಂದ ಹಿರೇಮಠ, ವೀರಭದ್ರಯ್ಯ ಗುಂಡಕಲ್, ಪ್ರಕಾಶ್ ಮಾವಿನಕೊಪ್ಪ, ಸತ್ಯಪ್ಪ ಮರಕಟ್ಟಿ, ಪಕಿರಗೌಡ ಪಾಟೀಲ್, ಈರಣಗೌಡ ಬರಗಾವಿ, ಬಸಪ್ಪ ಮಾವಿನಕೊಪ್ಪ, ಬಸವರಾಜು ಚಾಪಗಾವಿ, ಶಿವಪ್ಪ ಸಾದುನವರ್, ಕಾಂಗ್ರೆಸ್ ಮುಖಂಡರಾದ ಈರಯ್ಯ ಪೂಜೆರಾ, ಶಿವಲಿಂಗ ಕೊಪ್ಪದ್, ಆಲಿ ಸಾಬ್ ತೆಲಗಡೆ, ಬಸಯ್ಯ ದಮ್ಮನಗಿಮಠ, ಬಸಪ್ಪಾ ಪುಟ್ಟಿಯವರ  ಸಲಹೆಗಳೊಂದಿಗೆ  ಅದ್ದೂರಿಯಾಗಿ ಸಂಪನ್ನಗೊಂಡಿತು , ನಿನ್ನೆ  ವಾದ್ಯಮೇಳಗಳೊಂದಿಗೆ, ಅಪಾರವಾದ ಭಕ್ತ ಸಮೂಹದಲ್ಲಿ ದೇವಿಯ ಮಹಾ ರಥೋತ್ಸವವು ಪೂಜ್ಯ ಆರಾಧಕರು ಆದ ಬಸವರಾಜು ಹಿರೇಮಠ ನೇತೃತ್ವದಲ್ಲಿ ಸಂಗನಗೌಡ ಪಾಟೀಲ್, ಸೋಮನಗೌಡ ಪಾಟೀಲ್, ರುದ್ರಗೌಡ ಹಟ್ಟಿಹೊಳಿ ಅಮೃತ ಹಸ್ತದ  ಸಹಯೋಗದಲ್ಲಿ ನೆರವೇರಿತು, ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಗದಿಗಯ್ಯ ಗುಂಡಕಲ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು 5 ದಿನದ ಜಾತ್ರಾ ಮಹೋತ್ಸವದ ಯಶಸ್ಸಿಗೆ ಶ್ರಮಿಸಿದರು, 

ಈ ಜಾತ್ರಾ ಮಹೋತ್ಸವದ ಉದ್ಘಾಟನೆಯನ್ನು ಕೇದಾರ ಪೀಠದ ಶಾಖಾ ಮಠಗಳ ಪೀಠಾಧಿಪತಿ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರ ಅಮೃತ ಹಸ್ತದಲ್ಲಿ ನೆರವೇರಿತು, ಪಾರೀಶ್ವಾಡದ ಪೂಜ್ಯ ಶಾಂಡಿಲೇಶ್ವರ ಶ್ರೀಗಳು, ಭೂತ ರಾಮನಹಟ್ಟಿಯ ಮುಕ್ತಿ ಮಠದ ಶಿವಸಿದ್ದ ಸೋಮೇಶ್ವರ  ಶ್ರೀಗಳು, ಅವರೊಳ್ಳಿಯ ಪೂಜ್ಯ ಚನ್ನಬಸವ ದೇವರು, ಹುಲಿಕಟ್ಟಿಯ ಲಿಂಗಾನಂದ ಸ್ವಾಮಿಜಿಗಳು  ಸೇರಿದಂತೆ ವಿವಿಧ ಸ್ವಾಮೀಜಿಗಳು ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು, ದಿನನಿತ್ಯ ಪ್ರವಚನದ ನೇತೃತ್ವವನ್ನು ಗಂಧಿಗವಾಡ ಗ್ರಾಮದ ಶ್ರೀ ಮೃತ್ಯುಂಜಯ ಸ್ವಾಮೀಜಿ ವಹಿಸಿದ್ದರು.  ದೇವಸ್ಥಾನದ ದೇವಿಯ ಅಲಂಕಾರ ಪೂಜೆಯನ್ನು ಚೇತನ ಶಾಸ್ತ್ರಿಗಳು ವಹಿಸಿದ್ದರು, ನಿನ್ನೆ ಹನುಮನ್ ಜಯಂತಿ ನಿಮಿತ್ಯ ಭಾವಚಿತ್ರವನ್ನು ಆರಾಧನೆ ಮಾಡಿ ಸಕಲ ಡಾಲ್ಬಿ  ಮೆರವಣಿಗೆಗಳೊಂದಿಗೆ ಗ್ರಾಮದ ಯುವಕರು ನೃತ್ಯ ಮಾಡುವ ಮೂಲಕ ಮೆರವಣಿಗೆ ಮಾಡಿದರು. ದಿನನಿತ್ಯ ಅನ್ನ ದಾಸೋಹವನ್ನು ಭಕ್ತಾದಿಗಳಿಗೆ ಏರ್ಪಡಿಸಲಾಗಿತ್ತು, ವಿವಿಧ ಸಾಧಕರಿಗೆ ಸನ್ಮಾನವನ್ನು ಮಾಡಲಾಯಿತು. 

ನಿನ್ನೆ ರಥೋತ್ಸವದ ಸಂದರ್ಭದಲ್ಲಿ ನಮ್ಮ ಪತ್ರಿಕಾ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಮತ್ತು ತಂಡ ಎಲ್ಲಾ  ಪೂಜ್ಯ ಶ್ರೀಗಳಿಗೆ, ಅಧ್ಯಕ್ಷರು, ಹಿರಿಯರಿಗೆ ಸನ್ಮಾನ ಮಾಡಿದರು. ಮಕ್ಕಳು ಮನರಂಜನೆ ಕಾರ್ಯಕ್ರಮವನ್ನು ಸಹ ನೀಡಿದರು. ಪೊಲೀಸ್ ಇಲಾಖೆ ವತಿಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು, ಆದ್ದರಿಂದ ನಿನ್ನೆ ದೇವಸ್ಥಾನದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಹಿರಿಯರು ಆದ ತಿಪ್ಪನಗೌಡ ಪಾಟೀಲ್ ಸನ್ಮಾನವನ್ನು ಮಾಡಿದರು.  ಒಟ್ಟಾರೆ ಅದ್ದೂರಿಯಾಗಿ 11 ನೇ ವರ್ಷದ ಜಾತ್ರಾ ಮಹೋತ್ಸವವು ವೀರಾಪುರ ಗ್ರಾಮದ ಎಲ್ಲಾ ಸಮಸ್ತ ಜನತೆ ಹಾಗೂ ಸಕಲ ಭಕ್ತಾದಿಗಳ ತನು, ಮನ ಹಾಗೂ ಧನದ ಕಾಣಿಕೆಯಲ್ಲಿ ಅದ್ದೂರಿಯಾಗಿ ನೆರವೇರಿತು. 

 

Post a Comment

Previous Post Next Post

Contact Form