ಕುಡಚಿ: ಬಿಜೆಪಿಯವರು ಅಭಿವೃದ್ಧಿ ಪರ ರಾಜಕೀಯ ಮಾಡಲ್ಲ. ಸುಳ್ಳು ಹೇಳುವುದೇ ಬಿಜೆಪಿಯ ಸಾಧನೆಯಾಗಿದೆ. ನೀರಾವರಿ ಯೋಜನೆ, ಶೈಕ್ಷಣಿಕ ಕ್ಷೇತ್ರಕ್ಕೆ ಬಿಜೆಪಿ ಏನು ಕೊಡುಗೆ ನೀಡಿದೆ ಎಂಬುವುದನ್ನು ನೀವು ಪ್ರಶ್ನಿಸಬೇಕೆಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಕುಡಚಿ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಪರ ಹಮ್ಮಿಕೊಂಡಿದ್ದ ಪ್ರಚಾರಾರ್ಥ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸುಳ್ಳನ್ನ ಎಷ್ಟು ವರ್ಷ ಕೇಳಬೇಕು. ಪ್ರಧಾನಿ ಮೋದಿ ಅವರ ಸುಳ್ಳು ಹೇಳುವುದನ್ನು ಕೇಳಿ, ಕೇಳಿ ಸಾಕಾಗಿದೆ. ಆದ್ದರಿಂದ ಸುಳ್ಳು ಹೇಳುವವರನ್ನು ಮನಗೆ ಕಳಿಸುವ ಕೆಲಸ ನೀವು ಮಾಡಬೇಕೆಂದು ಕರೆ ನೀಡಿದರು.
ನಿಮ್ಮ ಕೆಲಸ, ಕಾರ್ಯಗಳಿಗೆ ಸ್ಪಂದಿಸುವ, ಕಷ್ಟ ಕಾಲಕ್ಕೆ ಸಹಾಯ ಮಾಡುವವರನ್ನು ನೀವು ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಆಯ್ಕೆ ಮಾಡಬೇಕು. ಕಳೆದ 30 ವರ್ಷಗಳಿಂದ ಬೆಳಗಾವಿ ಜಿಲ್ಲೆ ಸೇರಿದಂತೆ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದೇವೆ. ಆದ್ದರಿಂದ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರ ಗೆಲುವಿಗೆ ಶ್ರಮಿಸಿ ಎಂದು ಮನವಿ ಮಾಡಿದರು.
ಪ್ರಿಯಾಂಕಾ ಜಾರಕಿಹೊಳಿ ಕಳೆದ ಸುಮಾರು ವರ್ಷಗಳಿಂದ ಜನರೊಂದಿಗೆ ಬೆರೆತು ಜನರ ಸಮಸ್ಯೆಗೆ ದನಿ ಆಗುತ್ತಿದ್ದಾರೆ. ಅವರನ್ನು ಚಿಕ್ಕೋಡಿ ಕ್ಷೇತ್ರದಿಂದ ಆಯ್ಕೆ ಮಾಡಿದರೆ ನಮ್ಮ ಪರವಾಗಿ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ನಾವು ಯಾವಾಗಲೂ ನುಡಿದಂತೆ ನಡೆದಿದ್ದೇವೆ. ಕೊಟ್ಟ ಮಾತನ್ನು ಯಾವತ್ತು ತಪ್ಪಿಲ್ಲ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ವಿನೋದ ಮಗದುಮ್, ರತ್ನಂಜಯ ಕದ್ದು,ಜೈಯವೀರ ಹುಂಚಿನಮೋರೆ, ಪ್ರೇಮಕುಮಾರ ಬಾಲೋಜಿ, ಕುಮಾರ ಗುಂಡಾಳೆ, ಲಕ್ಷ್ಮಣ ತೇಲಿ, ಚಿದಾನಂದ ಮೋದಿ, ನಾಮದೇವ ನಿಕ್ಕಂ, ಮಹೇಶ ಪಟ್ಟಣಶೆಟ್ಟಿ, ಜೈಕುಮಾರ ಸನದಿ,ಸಂಜು ಗಸ್ತಿ ಶ್ರೀಮಂತ ಗಸ್ತಿ, ಶ್ರೀಮಂತ ನಾಯಕ, ಅಜೀತ್ ಬಸ್ತವಾಡೆ, ಸಂದೀಪ ಗಸ್ತಿ, ಈರಪ್ಪಗಸ್ತಿ, ಅಣ್ಣಸಾಬ್ ಸನದಿ, ಅಜೀತ್ ಗಸ್ತಿ, ಮಧುಕರ್ ಸನ್ನಕ್ಕಿ ,ಸರೇಶ ಹೊಸಮನಿ, ಗೋವಿಂದ ಸುತ್ತಾರ ಸೇರಿದಂತೆ ಹಲವಾರು ಮುಖಂಡರು ಇದ್ದರು.