ಸದ್ಯ ಇಂಡಿಯನ್ ಸಿನಿಮಾದಲ್ಲಿ ಪೌರಾಣಿಕ ಕಥೆಗಳದ್ದೇ ಅಬ್ಬರ. ಪೌರಾಣಿಕ ಸ್ಟೋರಿ ಅಂದ್ರೆ ಆ ಸಿಮಿಮಾ ಸಕ್ಸಸ್ ಫಿಕ್ಸ್ ಅನ್ನೋ ಮಾತಿದೆ. ಅದರ ಸಾಲಿನಲ್ಲಿ ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿರುವ ರಾಮಾಯಣ ಸಿನಿಮಾವೂ ಸೇರಿಕೊಳ್ಳುತ್ತಿದೆ. ಬಾಲಿವುಡ್‌ನ ಬಿಗ್ ಬಜೆಟ್ ಸಿನಿಮಾ ‘ರಾಮಾಯಣ’ ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಭಾರತೀಯ ಸಿನಿಮಾದ ಬಿಗ್ ಸ್ಟಾರ್ ಗಳೇ ಈ ಮೂವಿಯಲ್ಲಿ ನಟಿಸಲಿದ್ದಾರೆ. ನಿತೇಶ್ ತಿವಾರಿ ಈ ಸಿನಿಮಾವನ್ನು ನಿರ್ದೇಶಿಸಲಿದ್ದು, ಬಾಲಿವುಡ್ ನಟ ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್, ನಟಿ ಸಾಯಿಪಲ್ಲವಿ ನಟಿಸಲಿದ್ದಾರೆ. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿಪಲ್ಲವಿ, ರಾವಣನಾಗಿ ಯಶ್ ನಟಿಸಲಿದ್ದಾರೆ. ಸ್ಟಾರ್ ಯಾರು ಎಂಬ ಕ್ಯೂರಿಯಾಸಿಟಿ ಕೊನೆಯಾಗ್ತಿದ್ದಂತೆ, ಈಗ ನಟ, ನಟಿಯರ ಸಂಭಾವನೆ ಬಗ್ಗೆ ಸುದ್ದಿ ಸಖತ್ ಜೋರಾಗಿಯೇ ಹರಿದಾಡುತ್ತಿದೆ. ಬಂದಿರೋ ಸುದ್ದಿ ಪ್ರಕಾರ ಸೀತೆಯ ಪಾತ್ರಕ್ಕಾಗಿ ತಮ್ಮ ಸಂಭಾವನೆಯನ್ನ ಸಾಯಿಪಲ್ಲವಿ ಮೂರು ಪಟ್ಟು ಹೆಚ್ಚಿಸಿಕೊಂಡಿದ್ದಾರೆ. ‘ರಾಮಾಯಣ’ ಚಿತ್ರಕ್ಕಾಗಿ ಪಡೆಯೋ ಒಟ್ಟು ಸಂಭಾವನೆ ಬರೋಬ್ಬರಿ 18-20 ಕೋಟಿ. ಇನ್ನೂ ರಣಬೀರ್ ಕಪೂರ್ ಬರೋಬ್ಬರಿ 225 ಕೋಟಿ ಪಡೆಯಲಿದ್ದಾರೆ. ಕೆಜಿಎಫ್ ಖ್ಯಾತಿಯ ಯಶ್, ರಾಮಾಯಣ ಸಿನಿಮಾದಲ್ಲಿ ಎರಡನೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದು, ರಾಮಾಯಣ ಸಿನಿಮಾಗಾಗಿ ಯಶ್ 150 ಕೋಟಿ ಸಂಭಾವನೆ ಪಡೆಯಲಿದ್ದಾರೆ.