ವಿಜಯ ನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಕಲ್ಲಳ್ಳಿ ಗ್ರಾಮದಲ್ಲಿ ಹತ್ತಾರು ಕಾರ್ಮಿಕರು ಸೇರಿಕೊಂಡು ಕೇಕ್ ಕತ್ತರಿಸುವ ಮೂಲಕ ನೆರೆದಂತ ಕಾರ್ಮಿಕರು ಸಿಹಿ ಹಂಚಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಿಂದ ಕಾರ್ಮಿಕ ದಿನಾಚರಣೆಯನ್ನು ಸಂತೋಷದಿಂದ ಆಚರಣೆ ಮಾಡಿ ನಂತರ ನೆರೆದಂತ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಕಲ್ಲಳ್ಳಿ ಗ್ರಾಮ ಪಂಚಾಯತಿ ಪಿ ಡಿ ಓ ರವರ ಮುಂಖಾಂತರ ಮಾನ್ಯ ಝೆಡ್ ಬಿ. ಝಮೀರ್ ಅಹಮದ್ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಕಾರ್ಮಿಕರ ಬೇಡಿಕೆಗಳು
ನರೇಗಾದಡಿ ಕೆಲಸ ಮಾಡಿದ ಬಾಕಿ ಕೂಲಿ ಮಾಡಿದ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು
ಹೈದರಾಬಾದ್ ಕರ್ನಾಟಕದ ಪ್ರದೇಶವು ಬಿಸಿಲಿನ ಪ್ರಮಾಣ ಹೆಚ್ಚಿದ್ದು ನರೇಗಾ ಎರಡು ಹಂತದ NMMS ಹಾಜರಾತಿ ಕಡ್ಡಾಯ ಮಾಡಿದ್ದು ಒಂದು ಹಂತದಲ್ಲಿ ಮಾಡಬೇಕು,
ರಾಜ್ಯದಲ್ಲಿ ಈಗಗಲೇ ಏಪ್ರಿಲ್ ತಿಂಗಳಲ್ಲಿ ನರೇಗಾ ಕೆಲಸ ಮಾಡುವಾಗ ಎರಡು ಜನ ಕಾರ್ಮಿಕರು ಸಾವನ್ನಪ್ಪಿದ್ದು ಸರ್ಕಾರ ಕೊಡುವ ಎರಡು ಲಕ್ಷ ಸಾಲುತ್ತಿಲ್ಲ ಅದನ್ನು 5 ಲಕ್ಷಕ್ಕೆ ಹೆಚ್ಚಿಸಬೇಕು,
NMMS ತಂತ್ರಾoಶ ದಲ್ಲಿ ಒಮ್ಮೆ ಹಾಜರಾತಿ ಹಾಕಿದರೆ ತಿದ್ದುಪಡೆ ಮಾಡಲು ಅಥವಾ ತೆಗೆದು ಹಾಕಲು ಹ್ಯಾಪ್ ಕೊಡಬೇಕು,
ನರೇಗಾ ಕಾರ್ಮಿಕರನ್ನು ಕಟ್ಟಡ ಕಾರ್ಮಿಕರೆಂದು ಪರಿಗಣಿಸಿ ಕಟ್ಟಡ ಕಾರ್ಮಿಕರ ಕಾರ್ಡ್ ನೀಡಬೇಕು.
ಹೀಗೆ ಸರ್ಕಾರಕ್ಕೆ ತಮ್ಮ ಒತ್ತಾಯಗಳನ್ನು ಮನವಿ ಪತ್ರದಲ್ಲಿ ಸಲ್ಲಿಸಿದ್ದು ಈ ದೇಶದ ನಿಜವಾದಂತ ಕೂಲಿ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ಸಿಗುವಂತೆ ಗ್ರಾಕೋಸ್ ಮುಖಂಡರಾದ ತಾಲೂಕು ಸಂಚಾಲಕಿ ಸೈನಾಜ್, ಹೇಮಾವತಿ, ಪರಶುರಾಮ್, ಅಂಜಿನಿ,ಲಕ್ಷ್ಮಿ, ದಾಸಪ್ಪ,ಮಂಜುಳಾ, ಚಾಂದಿನಿ, ರಾಮವ್ವ, ದುರ್ಗವ್ವ,ಎರ್ರಪ್ಪ ಹನುಮೇಶ ಇನ್ನು ಮುಂತಾದವರು ಭಾಗವಹಿಸಿದ್ದರು