ಹಾವೇರಿ ಜಿಲ್ಲೆ, ಬ್ಯಾಡಗಿ ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿಗಳ ಆಧ್ಯಾತ್ಮ ಪ್ರವಚನ ಕಾರ್ಯಕ್ರಮವು ಸಂಜೆ 6 ಗಂಟೆಯಿಂದ 7: ಗಂಟೆವರೆಗೂ ನಡೆಯುತ್ತಿದ್ದು

 ಹಾವೇರಿ ಜಿಲ್ಲೆ, ಬ್ಯಾಡಗಿ ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿಗಳ  ಆಧ್ಯಾತ್ಮ ಪ್ರವಚನ ಕಾರ್ಯಕ್ರಮವು ಸಂಜೆ 6 ಗಂಟೆಯಿಂದ 7: ಗಂಟೆವರೆಗೂ ನಡೆಯುತ್ತಿದ್ದು 

        ಮಂಗಳವಾರ ತಾಲೂಕಿನ ಮಲ್ಲೂರ ಗ್ರಾಮದಲ್ಲಿ ಮುಂಜಾನೆ ಗ್ರಾಮದ  ಪ್ರಮುಖ ಬೀದಿಗಳಲ್ಲಿ ನೂರಾರು ಭಕ್ತರೊಂದಿಗೆ ಪಾದಯಾತ್ರೆ ಮೂಲಕ ಸಂಚರಿಸಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಭೆಯನ್ನುದ್ದೇಶಿಸಿ  ಶ್ರೀಗಳು ಮಾತನಾಡಿ, 

.ಮಾತೃ ಪಿತೃಗಳ, ಗುರು, ಮನೆ ಹಾಗೂ ದೇಶ ಧರ್ಮ ಸೇವೆಗೆ ಯೌವನವನ್ನು ಮೀಸಲಿಟ್ಟಾಗ ಯುವ ಜನಾಂಗದ ಜೀವನ ಸಾರ್ಥಕವಾಗಲಿದೆ.

       ಈ ಭೂಮಿ ಇದೊಂದು ಶಕ್ತಿಯ ಕೇಂದ್ರ ಹಾಗೂ ಶಕ್ತಿಯ ತಾಣ, ವಸ್ತು ವಸ್ತುಗಳ, ವ್ಯಕ್ತಿ ವ್ಯಕ್ತಿಗಳ ನಡುವೆ ಶಕ್ತಿ ಸೇಳೆಯುತ್ತದೆ. ಈ ಭೂಮಿ ಸೂರ್ಯನ ಕಕ್ಷೆಯ ಸುತ್ತಲೂ ಏಕೇ ಸೇಳೆಯುತ್ತದೆ ಎಂಬುವುದೇ ಅದ್ಭುತ. ಇದುವೇ ಆಕರ್ಷಣೆಯ ಶಕ್ತಿ ದೇವರ ಲೀಲೆ ಎಂದರು.

        ತಾಯಿ ಪ್ರೇಮ ಮೊದಲೂ ಪ್ರೇಯಸಿ ಪ್ರೇಮ ಮೊದಲೂ ಎನ್ನುವುದಕ್ಕೆ ಆಕರ್ಷಣೆಯೇ ಮೂಲವಾಗಿದೆ.

ಪ್ರೇಮಕ್ಕೆ ಅರಿವಿನ ಕಣ್ಣಿಲ್ಲವೆಂದರು.

ರಾಜ ಮಹಾರಾಜರು ಆಳಿ ಬಾಳಿ ಅಳಿದು ಹೋಗಿದಿದ್ದಾರೆ.  ಸ್ಮೋಕಿಂಗ್ ಹಾಗೂ ಡ್ರಿಂಕಿಂಗ್ ಮಾತ್ರ ಇನ್ನೂ ಜಗತ್ತನ್ನು ಆಳುತ್ತಿವೆ. ಇದಕ್ಕೆಲ್ಲ ಇಂದ್ರಿಯಗಳ ಹಿಡಿತ ಮುಖ್ಯವೆಂದರು.

         ಬ್ರಹ್ಮಚರ್ಯ ಎಂದರೇ ಮೀಸಲು, ಇದನ್ನು ಪ್ರತಿಯೊಬ್ಬರೂ ಆಚರಣೆ ಮಾಡಬೇಕಿದೆ.

ಬಸವಣ್ಣನವರು ಮೀಸಲು ಕೆಡಿಸಿಕೊಳ್ಳದೇ ಹೃದಯವನ್ನೇ ದೇವರಿಗೆ ಮೀಸಲಾಗಿಟ್ಟಿದ್ದರು. ದೇವರೆಂದರೇ ಒಳ್ಳೆಯದು ಎಂದು ಅರ್ಥ, ಜೀವನವನ್ನೇ ಮೀಸಲಾಗಿಟ್ಟಲ್ಲಿ ಪರಮಾತ್ಮನ ಕೃಪೆಗೆ ಪಾತ್ರರಾಗಲು ಸಾಧ್ಯವಿದೆ.

      ಕವಿಯಾದ ಫ.ಗು ಹಳಕಟ್ಟಿ ಅವರು ಸಂತ ಶರಣರ ದಾರ್ಶನಿಕರ ವಚನಗಳನ್ನು ಹೆಕ್ಕಿ ತೆಗೆದು ಆಧ್ಯಾತ್ಮಿಕ, ಧಾರ್ಮಿಕ ಆಚಾರ, ವಿಚಾರ, ಪ್ರವಚನಗಳ ಸಾರವನ್ನು ಉಳಿಸಿ ಹೋಗಿದ್ದು ಸ್ಮರಣೀಯ ಕಾರ್ಯವೆಂದರು

Post a Comment

Previous Post Next Post

Contact Form