■ ರಾಣಿ ಶೂಗರ್ಸ ವ್ಯಾಪ್ತಿಯ ರೈತರಿಗೆ ಮದ್ಯದ ಅಂಗಡಿಗಳ ಖಾಲಿ ಮದ್ಯದ ಪ್ಯಾಕೆಟ್ ಗಳು, ಬಾಟಲಿಗಳೇ ಕಂಟಕ...!
ಸ್ಥಳ : ಇಟಗಿ ಕ್ರಾಸ್
ಹೌದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಇಟಗಿ ಕ್ರಾಸ್ ನಿಂದ ರಾಣಿ ಶೂಗರ್ಸ್ ಗೆ ಹೋಗುವಾಗ ಅಕ್ಕ ಪಕ್ಕದಲ್ಲಿರುವ ಮದ್ಯದ ಅಂಗಡಿಗಳ ತ್ಯಾಜ್ಯ ವಸ್ತುಗಳು, ಖಾಲಿ ಮದ್ಯದ ಪ್ಯಾಕೆಟ್ ಗಳು ಹಾಗೂ ಖಾಲಿ ಬಾಟಲಿಗಳು ರಾಣಿ ಶೂಗರ್ಸ್ ನ ಮುಖ್ಯ ರಸ್ತೆಯ ಪಕ್ಕದಲ್ಲೇ ಹಿಂಡು ಹಿಂಡಾಗಿ ಹಾಕುತ್ತಿದ್ದಾರೆ. ಮತ್ತು ಈ ವ್ಯಾಪ್ತಿಯ ಅಕ್ಕ ಪಕ್ಕದ ರೈತರು ಬೆಳೆದ ಕಬ್ಬು ಮತ್ತು ಭತ್ತದ ಹೊಲಗಳಲ್ಲಿ ದಿನನಿತ್ಯ ಸಿಗುವ ಬಾಕ್ಸ್ ಗಟ್ಟಲೇ ಸಿಗುವ ಬಾಟಲಿಗಳು ಹಾಗೂ ಮದ್ಯದ ಪ್ಯಾಕೆಟ್ ಗಳಿಂದ ರೈತರು ತುಂಬಾ ರೋಸಿ ಹೋಗಿದ್ದಾರೆ. ಇನ್ನೂ ಹತ್ತಿರದಲ್ಲೇ ಇರುವ ಖಾಸಗಿ ಮದ್ಯದ ಅಂಗಡಿಗಳಿಂದ ದಿನ ನಿತ್ಯ ಈ ಮುಖ್ಯ ರಸ್ತೆಯಲ್ಲೇ ಮದ್ಯದ ತ್ಯಾಜ್ಯಗಳನ್ನು ಎಸೆಯಲಾಗುತ್ತಿದ್ದು ದಿನ ನಿತ್ಯ ಸಂಚಾರ ಮಾಡುವ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಇಷ್ಟೆಲ್ಲಾ ಗೊತ್ತಿದ್ದೂ ಗೊತ್ತಿಲ್ಲದಂತೆ ಇರುವ ಬೈಲಹೊಂಗಲ ಅಬಕಾರಿ ಅಧಿಕಾರಿಗಳ ನಡೆ ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ. ಆದ್ದರಿಂದ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ಬೆಳಗಾವಿ ವಿಭಾಗದ ಅಬಕಾರಿ ಇಲಾಖೆ ಉಪ ಆಯುಕ್ತರು ಆದ ವನಜಾಕ್ಷಿ. ಎಂ ಅವರ ಗಮನಕ್ಕೆ ತೆಗೆದುಕೊಂಡು ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದ್ರೂ ಈ ಇಟಗಿ ಕ್ರಾಸ್ ನ ಮದ್ಯದ ಅಂಗಡಿಗಳ ತ್ಯಾಜ್ಯಗಳಿಂದ ರೈತರಿಗೆ ಮುಕ್ತಿ ಸಿಗುವುದೇ ಎಂಬುದನ್ನು ಕಾದು ನೋಡಬೇಕಿದೆ.