ಚಾಪುಡಿ ಅಡ್ಡ ಮೇಲೆ ಆಹಾರ ಭದ್ರತಾ ಇಲಾಖೆ ಅಧಿಕಾರಿಗಳ ದಾಳಿ ಕಲಬೆರಕೆ ಟೀ ಪುಡಿ ವಶ

 ಚಾಪುಡಿ ಅಡ್ಡ ಮೇಲೆ  ಆಹಾರ ಭದ್ರತಾ ಇಲಾಖೆ ಅಧಿಕಾರಿಗಳ ದಾಳಿ ಕಲಬೆರಕೆ ಟೀ ಪುಡಿ ವಶ 


 ‌ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ರಸ್ತೆಯಲ್ಲಿ ಬರುವ ಗುಡಾನ ಒಂದರಲ್ಲಿ  ಟೀ ಪುಡಿಗೆ ಅಕ್ರಮವಾಗಿ ಬಣ್ಣ ಮಿಕ್ಸ್ ಕಲಬೇರಕೆ ಮಾಡಿ ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆ         ‌                                        ‌                                     ‌                 ‌        ಆಹಾರ ಗುಣಮಟ್ಟ ಸುರಕ್ಷತಾ ಅಧಿಕಾರಿ ರಾಜೇಂದ್ರ ಗಡಾದ ಹಾಗೂ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಕ್ರೈಂ ಪಿಎಸ್ಐ ಟಿ.ಕೆ. ರಾಠೋಡ್, ಅವರು  ಶನಿವಾರ ಗೋದಾಮಿನ ಮೇಲೆ ದಾಳಿ ನಡೆಸಿದಾಗ ಅಕ್ರಮ ಬಯಲಾಗಿದೆ. ಅಕ್ರಮವಾಗಿ ಸಂಗ್ರಹಿಸಿದ್ದ ಅಂದಾಜು 15 ಲಕ್ಷ ರೂಪಾಯಿ ಮೌಲ್ಯದ 10 ಟನ್ ಕಲಬೆರಕೆ ಟೀ ಪುಡಿಯನ್ನು ವಶಕ್ಕೆ ಪಡೆದರು

ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕಲಬೆರಕೆ ಟೀ ಪುಡಿ ಮಾರಾಟ ಮಾಡಲಾಗುತ್ತಿದ್ದು 12 ರಿಂದ 15 ಕೆಜಿ ಟೀ ಪುಡಿಗೆ ಅರ್ಧ ಕೆಜಿ ಸಿಂಥೆಟಿಕ್ ಕಲರ್ ಬಳಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಲಕ್ಷ್ಮೀಶ್ವರದ ವ್ಯಾಪಾರಿಯೊಬ್ಬರು ಅನಧಿಕೃತವಾಗಿ ಟೀ ಪುಡಿಗೆ ಬಣ್ಣ ಬೆರೆಸಿ ಮಾರಾಟ ಮಾಡುತ್ತಿದ್ದಾರೆ. ಖ್ಯಾತನಾಮ ಬ್ಯಾಂಡ್ ಕಂಪನಿಯ ಉತ್ಪಾದನೆಯನ್ನು ನಕಲು ಮಾಡಿ ಜನರಿಗೆ ಮೋಸ ಮಾಡಿ ಕಂಪನಿಯ ಹೆಸರನ್ನು ಹಾಳು ಮಾಡುತ್ತಿದ್ದಾರೆ ಹಾಗೂ ವ್ಯಾಪಾರದಲ್ಲಿ ನಷ್ಟ ಉಂಟು ಮಾಡಿದ್ದಾರೆ ಎಂಬ ದೂರು ಸಹ ಕೇಳಿ ಬಂದಿತ್ತು ಎನ್ನಲಾಗಿದೆ  



ಲಕ್ಷೇಶ್ವರದಲ್ಲಿ ರಹಸ್ಯ ಗೋದಾಮಿನಲ್ಲಿ ಸಂಗ್ರಹಿಸಿದ್ದ ಕಲಬೆರಕೆ ಚಹಾಪುಡಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ಕೈಗೊಂಡಿದ್ದಾರೆ.


Post a Comment

Previous Post Next Post

Contact Form