ಎಲ್ಲಾ ಮಹಾನೀಯರ ಜಯಂತಿಗಳು ಅರ್ಥಪೂರ್ಣವಾಗಿ ಆಚರಿಸಲಾಗುವುದು ಶಾಸಕರಾದ ಎನ್ ಟಿ ಶ್ರೀನಿವಾಸ್
ಕೂಡ್ಲಿಗಿ: ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಆಡಳಿತ ಕಚೇರಿಯಲ್ಲಿ ಆಚರಿಸಿದ ವಣಿಕೆ ಓಬವ್ವನ ಜಯಂತಿಯ ಕುರಿತು ಎಲ್ಲಾ ಮಹತ್ಮರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಹೇಳಿದರು. ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ವೀರವನಿತೆ ಒನಕೆ ಓಬವ್ವ ಇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಮಹನೀಯರುಗಳ ಜಯಂತಿಗಳನ್ನು ತಾಲೂಕು ಆಡಳಿತದಿಂದ ಅರ್ಥಪೂರ್ಣವಾಗಿ ಆಚರಿಸಲು ನಿಮ್ಮೆಲ್ಲರ ತಾಳ್ಮೆ, ಸಹಕಾರದ ಅಗತ್ಯವಿದೆ. ನಾಡಿಗಾಗಿ ಶೌರ್ಯ ಮೆರೆದು, ಛಲ ಬಿಡದೆ ಹೋರಾಡಿದ ಛಲವಾದಿ ಮಹಿಳೆ ಕೇವಲ ಛಲವಾದಿ ಸಮುದಾಯಕ್ಕೆ ಸೀಮಿತಗೊಳಿಸದೆ, ಓಬವ್ವ ನಾಡಿನ ಅಸ್ಮಿತೆಯಾಗಿದ್ದಾರೆ ಎಂದರು. ಇದುವರೆಗೂ, ಓಬವ್ವಳ ತವರು ಕೂಡ್ಲಿಗಿ ಎಂದು ರಾಜ್ಯಮಟ್ಟದಲ್ಲಿ ಅನೇಕರಿಗೆ ತಿಳಿದಿಲ್ಲ. ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿದ ಮಹಾತಾಯಿ ಎಂದು ಬಣ್ಣಿಸಿ, ಇತಿಹಾಸ ಪುಟದಲ್ಲಿ ರಾರಾಜಿಸುತ್ತಿರುವ ಒಬ್ಬ ವನಿತೆಯ ಬಗ್ಗೆ ಒಂದು ವೃತ್ತ ಮಾಡುವುದರೊಂದಿಗೆ, ಸಮುದಾಯ ಭವನ ನಿರ್ಮಾಣಮಾಡುವುದರೊಂದಿಗೆ, ಉತ್ಸವಗಳನ್ನು ಆಚರಿಸುವುದರೊಂದಿಗೆ ಮಾತ್ರ ಇಂತಹ ಮಹನೀಯರುಗಳು ಜಯಂತಿಯನ್ನು ಅರ್ಥಪೂರ್ಣಗೊಳಿಸಲು ಸಾಧ್ಯವಿದೆ ಎಂದು ಶಾಸಕರು ಅಭಿಪ್ರಾಯ ತಿಳಿಸಿದರು. ಹೀಗಾಗಲೇ, ಕಳೆದ ವರ್ಷ ಗುಡೇಕೋಟೆಯಲ್ಲಿ ಅದ್ಧೂರಿಯಾಗಿ ವೀರವನಿತೆ ಒನಕೆ ಓಬವ್ವಳ ಜಯಂತಿ ಉತ್ಸವವನ್ನು ಸಡಗರ, ಸಂಭ್ರಮದೊoದಿಗೆ ಆಚರಿಸಿದ್ದೇವೆ. ಈ ಬಾರಿ ಕೂಡಾ ಪೂರ್ವ ಸಭೆಯಲ್ಲಿ ಒಮ್ಮತದ ನಿರ್ಣಯದೊಂದಿಗೆ ಉತ್ಸವವನ್ನು ಆಚರಿಸೋಣ, ಇದಕ್ಕೆ ಅಗತ್ಯವಾಗಿ ಎಲ್ಲರ ತಾಳ್ಮೆ, ಸಹಕಾರವನ್ನು ಕೋರುತ್ತೇನೆ ಎಂದರು. ಉಪನ್ಯಾಸವನ್ನು ಬಿಸಿಯೂಟ ಯೋಜನಾಧಿಕಾರಿ ಕೆ.ಜಿ. ಆಂಜನೇಯ ಓಬವ್ವಳ ಇತಿಹಾಸದ ರೋಚಕ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ನಾಗರಹಾವು ಚಲನಚಿತ್ರದಲ್ಲಿ ಪುಟ್ಟಣ್ಣ ಕಣಗಲ್ ಅವರು, ಹಾಡಿನಲ್ಲಿ ಬರುವ ದೃಶ್ಯದಲ್ಲಿ ಓಬವ್ವಳನ್ನು ಖಡ್ಗದೊಂದಿಗೆ ಇರಿದು ಕೊಲ್ಲುವ ಪ್ರಸಂಗಮಾತ್ರ ಒಪ್ಪುವಂತಿಲ್ಲ. ಹೈದರ್ ಅಲಿ ಸೈನಿಕರ ರುಂಡಗಳ ಚಂಡಾಡಿದ ನಂತರವೂ, ಸುಧೀರ್ಘ ೨ವರ್ಷಗಳ ಕಾಲ ವೀರವನಿತೆ ಒನಕೆ ಓಬವ್ವ ಬದುಕಿರುವ ಬಗ್ಗೆ ಸಾಕ್ಷಿಗಳಿವೆ ಎಂದರು. ದೊಡ್ಡ ಮಟ್ಟದಲ್ಲಿ ವಿಚಾರ ಸಂಕಿರಣಗಳನ್ನು ನಡೆಸುವ ಮೂಲಕ ಒನಕೆ ಒಬವ್ವಳ ಬಗ್ಗೆ ಇಂದಿನ ಪೀಳಿಗೆಗೆ ಗೊತ್ತಾಗುವಂತಹ ಕಾರ್ಯವಾಗಬೇಕು ಎಂದರು.
ಈ ಸಂದರ್ಭದಲ್ಲಿ ಒನಕೆ ಓಬವ್ವನ ಕುರಿತು ಉಪನ್ಯಾಸವನ್ನು ಆಂಜನೇಯ ಅವರು ನೀಡಿದ್ದು ಎಲ್ಲರ ಗಮನ ಸೆಳೆದರು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ಎಂ ರೇಣುಕಾ, ಗ್ರೇಟು ತಹಶೀಲ್ದರಾದ ವಿ.ಕೆ ನೇತ್ರಾವತಿ, ವಿಶ್ವನಾಥ್ ಅಖಿಲ ಕರ್ನಾಟಕ ಓಬವ್ವಳ್ಳ ಅಭಿಮಾನಿಗಳ ಸಂಘದ ಅಧ್ಯಕ್ಷ ರು ಯು.ಉಮೇಶ್ ಮತ್ತು ಅಖಿಲ ಕರ್ನಾಟಕ ಚಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷರು ಮರವನಹಳ್ಳಿ ಮಾರಪ್ಪ, ಕರವೇ ತಾಲೂಕ ಅಧ್ಯಕ್ಷ ಕಾಟೇರ ಹಾಲೇಶ್, ಕಾಸಪ ರಾಜ್ಯ ಸರ್ಕಾರಿ ನೌಕರ ಸಂಘದ ತಾಲೂಕ ಅಧ್ಯಕ್ಷರಾದ ವೆಂಕಟೇಶ್, ಅಧ್ಯಕ್ಷರಾದ ಅಂಗಡಿ ವೀರೇಶ್ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪದ್ಮನಾಭಕರಣಂ ಜಂಗಮ ಸಮಾಜದ ತಾಲೂಕ ಅಧ್ಯಕ್ಷರಾದ ಹಿರೇಮಠ ಗಂಗಾಧರಯ್ಯ, ಸೇರಿದಂತೆ ವಿವಿಧ ಸಮಾಜದ ಸಂಘಟನೆ ಅಧ್ಯಕ್ಷರುಗಳು ನೆರೆದಿದ್ದರು,
ತಾಲೂಕಿನ ಸಾಧಕರಿಗೆ ಸನ್ಮಾನ ನೆರವೇರಿಸಲಾಯಿತು.