ಗೆದ್ದಲ ಗಟ್ಟೆ ಗ್ರಾಮದಲ್ಲಿ ಸರ್ಕಾರಿ ಇಲಾಖೆಗಳ ನಿರ್ಲಕ್ಷ ಕ್ಕೆ ದಲಿತ ಜನಗಳಿಗೆ ಸಿಗದ ಮೂಲ ಭೂತ ಸೌಲಭ್ಯಗಳು,
ಈ ಗ್ರಾಮದ ದಲಿತ ಜನರ ಸಂಕಷ್ಟಗಳಿಗೆ ಇದರ ಬಗ್ಗೆ ಶೀಘ್ರದಲ್ಲಿ ತಾಲೂಕು
ಆಡಳಿತ ಇಲಾಖೆಯು ಎಚ್ಚಾತ್ತು ಕೊಂಡು ಜನರ ಬೇಡಿಕೆ ಈಡೇರಿಸಲು ಮುಂದಾಗುತ್ತಾ!
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ವ್ಯಾಪ್ತಿಯಲ್ಲಿ ಬರುವ ಜರ್ಮಲಿ ಗ್ರಾಮ ಪಂಚಾಯತಿಗೆ ಸೇರಿರುವ ಗೆದ್ದಲಗಟ್ಟೆ ಗ್ರಾಮದ ಗುಡ್ಡದ ಹಂಚಿನಲ್ಲಿ ವಾಸಿಸುತ್ತಿರುವ ಸುಮಾರು 10 ದಲಿತ ಕುಟುಂಬಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಲಿಲ್ಲದೆ ಇರುವ ಕುಡಿಯುವ ನೀರು, ಬೆಳಕಿನ ವ್ಯವಸ್ಥೆಗೆ ವಿದ್ಯುತ್, ಓಡಾಡಲು ದಾರಿವಿಲ್ಲದೆ ಇರುವ ರಸ್ತೆ, ಸರಿಸುಮಾರು ಎಂಟು ವರ್ಷಗಳಿಂದ ವಾಸ ಮಾಡುತ್ತಿದ್ದರು ಈ ಗ್ರಾಮದ ಜನರಿಗೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಕುಡಿಯುವ ನೀರುನ ಪೈಪ್ ಲೈನ್ ಮಾಡಿದ್ದಾರೆ.
ಕುಡಿಯುವ ನೀರು ವಾರಕ್ಕೆ ಒಂದು ಬಾರಿ ನೀರು ಬಿಡುವುದು ನೀರು ಘಂಟಿಯ ಕರ್ತವ್ಯ ನಿರ್ವಯಿಸುವ ನಿರ್ಲಕ್ಷತನದ ಕಷ್ಟ ಸಾಧ್ಯ ವಾಗಿದೆ ಅನ್ನುತ್ತಾರೆ ಅಲ್ಲಿ ವಾಸಮಾಡುವ ಸ್ಥಳೀಯರು,
ಗ್ರಾಮದ ಪಕ್ಕಲ್ಲಿ ಗುಡ್ಡದಿಂದ ಬಸ್ಸಿ ನೀರು ಬಂದು ಕುಕ್ಕದೋಣಿ ಬಾವಿ ಯಲ್ಲಿ ಸೇರಿರುವ ನೀರನ್ನು ಕುಡಿಲಿಕ್ಕೆ ಹಾಗೂ ಮನೆಗೆ ಬಳಿಸುವುದಕ್ಕೆ ಗುಂಡಿಗಲ್ಲಿ ನಿಂತಿರುವ ನೀರನ್ನೇ ಬಳಸುತ್ತಿದ್ದೇವೆ, ಆದರೆ ನಾವು ಸಹ ಮನುಷ್ಯ ರೇ ನಮ್ಮನ್ನಾಳುವ ಸರ್ಕಾರ ಹಾಗೂ ಸಂಬಂಧ ಪಟ್ಟಂತ ಇಲಾಖೆಯ ಅಧಿಕಾರಿಗಳು ನಮ್ಮ ದಲಿತ ಕುಟುಂಬದ ಜನರನ್ನು ಬಹಳ ಪಾಪದ ಕಣ್ಣಿನಿಂದ ನೋಡುತ್ತಿದ್ದರೆ,
ನಾವುಗಳು ಕುಡಿಯಲು ಹಾಗೂ ಮನೆಬಳಕೆಗೆ ಬಳುಸುತ್ತಿರುವ ಈ ನೀರಿನಿಂದ ಸಣ್ಣ ಸಣ್ಣ ಮಕ್ಕಳಿಗೆ ಹಾಗೂ ಹೆಣ್ಣು ಮಕ್ಕಳಿಗೆ ಮತ್ತು ಪುರುಷ ರಿಗೂ ಮೈಮೇಲೆ ತಿಂಡಿ ಗುಳ್ಳೆ ಹಾಗೂ ನಂಜಿನ ಗಾಯಗಲಾಗುತ್ತವೆ, ಈ ನೋವಿನ ಸಂಗತಿಯನ್ನು ಸಂಬಂಧ ಪಟ್ಟಂತ ಇಲಾಖೆಯ ಅಧಿಕಾರಿಗಳು ಶೀಘ್ರದಲ್ಲಿ ಈ ಜನರ ಕಷ್ಟಗಳಿಗೆ ನೇರವಾಗಬೇಕಾಗಿದೆ, ಹಾಗೆ ಜೇಸ್ ಕಂ ಇಲಾಖೆಯೂ ಹತ್ತಾರು ಮನೆಗಳಲ್ಲಿ ಒಂದು ಮನೆಯ ಕುಟುಂಬ ದಲ್ಲಿ ಐದಕ್ಕೂ ಹೆಚ್ಚು ಜನದಂತ್ತೆ 60 ಕ್ಕೂ ಹೆಚ್ಚು ಚುನಾವಣೆ ಮತದಾನ ದ ಚೀಟಿ ಹೊಂದಿರುವ ಈ ಕುಟುಂಬ ಸ್ಥರಿಗೆ ಎಷ್ಟೋ ಬಾರಿ ಜೇಸ್ ಕಂ ಇಲಾಖೆಗೆ ಕತ್ತಲಲ್ಲೇ ನಾವಿದ್ದೀವಿ ನಮಗೆ ಬೆಳಕಿನ ವಿದ್ಯುತ್ ಕಂಬಗಳನ್ನು ಹಾಕಿ ಕೊಡಿ ಹಾಗೂ ಮನೆಗಳಲ್ಲಿ ವಿದ್ಯುತ್ ಇಲ್ಲದೇ ಎಂದು ಎಷ್ಟೋ ವರ್ಷಗಳಿಂದ ಕೇಳಿಕೊಂಡರು ಮನವಿ ಪತ್ರ ಕೊಟ್ಟರೂ ಕ್ಯಾರೇ ಅನ್ನದಾ ಇಲಾಖೆಯ ಕಡು ನಿರ್ಲಕ್ಷಿಸುತ್ತಿರುವ ಇಲಾಖೆಯ ಅಧಿಕಾರಿಗಳು,
ಅದು ಏನೇ ಇರಲಿ, ಪ್ರತಿ ಬಾರಿ ಶಾಸಕರ ನೇತೃತ್ವದಲ್ಲಿ ನಡೆಯುವ ಪ್ರಗತಿ ಶೀಲನ ಸಭೆ ಯಲ್ಲಿ ಅಧಿಕಾರಿಗಳಿಗೆ ಜನರ ಮೂಲ ಭೂತ ಸೌಲಭ್ಯಗಳು ಸಿಗದೇ ನರಳುವಂತೆ ಹಾಗಬಾರದು ಎಂದು ಪ್ರತಿ ಸಭೆಯಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿ ಬೊಬ್ಬೆ ಹೊಡಿಯುತ್ತಾರೆ, ಆದರೆ ಕೂಡ್ಲಿಗಿ ತಾಲೂಕಿನಲ್ಲಿ ಇನ್ನೂ ಕನಿಷ್ಠ ಮೂಲಭೂತ ಸೌಲಭ್ಯ ಗಳು ಸಿಗದೇ ಪರದಾಡುವ ಪರಿಸ್ಥಿಯಲ್ಲಿ ನಾವಿದ್ದೀವಿ, ಎನ್ನುತ್ತಾರೆ ದಲಿತ ಸಂಘಟನೆಯ ಯುವಕರು ಇದನ್ನೂ ಗಮನ ಅರಿಸಿ ಶೀಘ್ರದಲ್ಲಿ ಶಾಸಕರು ಸ್ಥಳಕ್ಕೆ ಬೇಟಿ ನೀಡಿ ಆ ಜನರ ಸಂಕಷ್ಟಗಳಿಗೆ ಸ್ಪoದಿಸುವರೋ ಏನೋ! ಅನ್ನೋ ಭರವಸೆ ಯ ನಂಬಿಕೆಯಲ್ಲಿ ದಲಿತ ಕುಟುಂಬಗಳ ಮಹಿಳೆಯರು ಕಾಯುತಿದ್ದಾರೆ,
ಅದು ಏನೇ ಇರಲಿ
ಆದರೂ ಗುಡ್ಡದ ಪಕ್ಕದಲ್ಲಿ ವಾಸಿಸುವ ದಲಿತ ಜನರ ಕುಟುಂಬಸ್ಥರು ಕಡು ಕಷ್ಟದಲ್ಲಿನ ಜನರನ್ನು ಮಾನ್ಯ ಶಾಸಕರು ಶೀಘ್ರದಲ್ಲಿ ಇವರ ಕಷ್ಟ ಗಳನ್ನು ಗಮನ ಹರಿಸಿ ಸಂಬಂಧ ಪಟ್ಟಂತಹ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಎನ್ನುವುದು ದಲಿತ ಮುಖಂಡರ ಒತ್ತಾಯ ವಾಗಿದೆ,
ಕುಡಿಯಲು ನೀರು ಸಿಗದೇ ಹಾಗೂ ಅನೇಕ ಸಮಸ್ಯೆ ಗಳು ಉಂಟಾಗಿದ್ದು ಜನರಗಳು ಪರದಾಡುವಂಥ ಪರಿಸ್ಥಿತಿ ಉಂಟಾಗಿದೆ,
ಈ ದಲಿತರ ಕುಟುಂಬಗಳಿಗೆ ಶೀಘ್ರದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಎಚ್ಚೆತ್ತುಕೊಂಡು ಸಂಬಂಧಪಟ್ಟಂತ ಇಲಾಖೆಗೆ ಜನ ಜಾನುವಾರುಗಳಿಗೆ ನೀರು ಪೂರೈಕೆ ಆಗುವಂತೆ ಹಾಗೂ ಸರ್ಕಾರದ ಮೂಲಭೂತ ಸೌಕರ್ಯ ಗಳು ದಲಿತ ಕಾಲೋನಿಯ ಜನರಿಗೆ ಸಿಗುವಂತೆ ಜಿಲ್ಲಾಧಿಕಾರಿಗಳು ಇಲಾಖೆಯ ಅಧಿಕಾರಿಗಳಿಗೆ ಶೀಘ್ರದಲ್ಲಿ ಆ ಗ್ರಾಮದಲ್ಲಿ ವಾಸಿಸುವಂತ ಜನರ ಸಮಸ್ಯೆ ಗಳಿಗೆ ಸ್ಪಂದಿಸಿ ಮೂಲಭೂತ ಸೌಲಭ್ಯ ಗಳು ಸಿಗುವಂತೆ ಮಾಡುವ ಕ್ರಮ ತೆಗೆದು ಕೊಳ್ಳುವರೋ! ಅಥವಾ ಇಲ್ಲವೋ! ಕಾಡುನೋಡೋಣ, ಅದು ಏನೇ ಇರಲಿ ಗೆದ್ದಲ ಗಟ್ಟೆ ಗ್ರಾಮದ ದಲಿತ ಕುಟುಂಬಗಳ ಜ್ವಲoತ ಸಮಸ್ಯೆ ಗಳು ಪರಿಹರವಾಗಲಿ ಎನ್ನುವುದು ನಮ್ಮ ವಾಹಿನಿಯ ಕಳಕಳಿ,