ಹುರಳಿಕುಪ್ಪಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ವಿಜಯೋತ್ಸವ ಆಚರಿಸಿದರು.

 ಹುರಳಿಕುಪ್ಪಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ವಿಜಯೋತ್ಸವ ಆಚರಿಸಿದರು. ಹಾವೇರಿ ಜಿಲ್ಲೆ ಸವಣೂರ ತಾಲೂಕು ಹುರಳಿಕುಪ್ಪಿಯಲ್ಲಿ ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸೋಲಿನ ನಂತರ ಇಂದು ಗ್ರಾಮದಲ್ಲಿ ಶಿಗ್ಗಾಂವ್ ಸವಣೂರ ಮತಕ್ಷೇತ್ರದ ಅಭ್ಯರ್ಥಿಯಾದ ಯಾಸಿರ್ ಅಹ್ಮದ್ ಖಾನ್ ಪಠಾನ್ ರವರು ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಭರತ್ ಬೊಮ್ಮಾಯಿ ಯವರ ವಿರುದ್ಧ 13448 ಮತಗಳ ಅಂತರದಿಂದ ಜಯಭೇರಿ ಬಾರಿಸುವುದರ ಮೂಲಕ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹಾಗೂ ಈ ರಾಜ್ಯದ ಅಹಿಂದ ವರ್ಗದವರ ನಾಯಕನೆಂದೇ ಕರೆಯಲ್ಪಡುವ ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಇನ್ನೂ ಅನೇಕ ನಾಯಕರಗಳು ನಮ್ಮ ಗ್ರಾಮಕ್ಕೆ ಬಂದು ಮತಯಾಚನೆ ಮಾಡಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವುದರಿಂದ ನಮ್ಮ ಕೈ ಬಲಪಡಿಸಿ ದಂತಾಗುತ್ತದೆ ಎಂದು ಕೇಳಿಕೊಂಡಾಗ ಈ ಬಾರೀ ಎಲ್ಲಾ ವರ್ಗದ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ವಿಜಯ ಸಾಧಿಸುವಲ್ಲಿ ಸಹಕರಿಸಿದ್ದಾರೆಂದು ಊರಿನ ಗ್ರಾಮಸ್ಥರು ಅಭಿಪ್ರಾಯ ಪಟ್ಟರು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಬ್ಲಾಕ್ ಅಧ್ಯಕ್ಷರಾದ ನಾಗಪ್ಪ ತಿಪ್ಪಕ್ಕನವರ, ಮಲ್ಲಪ್ಪ ಹೊಸಳ್ಳಿ,ಫಕೀರೇಶ ಮಜ್ಜಿಗಿ, ಮಾಂತೇಶ್ ಮೆಣಸಕ್ಕನವರ, ನೀಶಿಮ ಕಳ್ಳಿಮನಿ, ಎಲ್ಲಪ್ಪ ವೈಯಾಳಿ,ಶ್ರೀಕಾಂತ ಕರ್ಜಗಿ, ಗಣೇಶ್ ಕುಲಕರ್ಣಿ,ಮಲ್ಲೇಶ್ ಸಂದ್ಲಿ,ರುದ್ರಪ್ಪ ಕಳ್ಳಿಮನಿ, ಬಸಪ್ಪ ಎರಸಿಮಿ, ತಿಪ್ಪಣ್ಣ ವಯ್ಯಾಳಿ, ಮಲ್ಲೇಶ್ ಹರಿಜನ್,ಗುಡ್ಡಪ್ಪ ಕರ್ಜಿಗಿ, ನಿಂಗರಾಜ್ ಇಂಗಳಗಿ ಹಾಗೂ ಗ್ರಾಮದ ಅನೇಕರಿದ್ದರು.


Post a Comment

Previous Post Next Post

Contact Form