No title

 ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಗಾಗಿ ಆ ಗ್ರಹಿಸಿ ಅರೆ ಬೆತ್ತಲೆ ಮೆರವಣಿಗೆ

ವಿಜಯ ನಗರ ಜಿಲ್ಲೆ ಹಗರಿ ಬೊಮ್ಮನಹಳ್ಳಿ . ಕರ್ನಾಟಕ ಪರಿಶಿಷ್ಟ ಜಾತಿಗಳು ಅದರಲ್ಲೂ ಮಾದಿಗ ಅಥವಾ ಮಾದರ ಸಮಾಜವು  ಅತೀ ಹೆಚ್ಚು  ಜನಸಂಖ್ಯೆ  ಹೊಂದಿದ  ಮತ್ತು ಶಿಕ್ಷಣ ಕ್ಷೇತ್ರದ  ಮೀಸಲಾತಿಯಲ್ಲಿ  ಅವಕಾಶ ವಂಚಿತ  ಬಹು ಸಂಖ್ಯಾತರಾಗಿರುವುದು ಸರಕಾರದ ಅಂಕಿ ಅಂಶಗಳು,ಎಲ್.ಜಿ.ಹಾವನೂರು ಆಯೋಗದ ವರದಿಯ  ಅಂಕಿ ಅಂಶಗಳು ಮತ್ತು ನಿವೃತ್ತ  ನ್ಯಾಯಮೂರ್ತಿ ಎ. ಜೆ. ಸದಾಶಿವ ಆಯೋಗದ ವಸ್ತುನಿಷ್ಠ ವರದಿಯಿಂದ  ದೃಢ ಪಟ್ಟಿ ರುವುದುಸ್ಪಷ್ಟ, ಎಂದು  ದಲಿತ ಮುಖಂಡ ಗದ್ದಿ ಕೇರಿ  ದೊಡ್ಡಬಸಪ್ಪ. ತಿಳಿಸಿದರು. ಪಟ್ಟಣದ  ರಾಮನಗರದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ  ಆಡಳಿತ ಸೌಧ  ದವರೆಗೆ ಮೆರವಣಿಗೆ ನಡೆಸಿ  ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿಗಾಗಿ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ನಂತರ ಮಾತನಾಡಿದ  ಡಾ. ಬಿಆರ್  ಅಂಬೇಡ್ಕರ್ ಸಂಘದ ತಾಲುಕು ಅಧ್ಯಕ್ಷ  ಗ ದ್ದಿಕೇರಿ ದೊಡ್ಡಬಸಪ್ಪ  ಮಾತನಾಡಿದರು.ಸಮಾಜದಲ್ಲಿ ತುಳಿತಕ್ಕೊಳಪಟ್ಟ ನಿರಂತರ  ಶೋಷಣೆ ಗೊಳಗಾದ  ಶೋಚನೀಯ  ಸ್ಥಿತಿಯಲ್ಲಿರುವ  ಮಾದಿಗ ಸಮಾಜವು  ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿನ  ನ್ಯಾಯ ಬದ್ದ  ಸವಿಂಧಾನ  ಬದ್ದ ಹಾಗು ಕಾನೂನು ಬದ್ದ  ಸಾಮಾಜಿಕ ನ್ಯಾಯದ  ಪರಿಕಲ್ಪನೆಯ  ಮೀಸಲಾತಿಯಿಂದ ಅವಕಾಶ ವಂಚಿತರಾಗಿರುವುದು ಸತ್ಯವಾದ ವಿಚಾರ ಕಳೆದ 30-32ವರ್ಷಗಳಿಂದ  ಹೋರಾಟ ಮಾಡಿಕೊಂಡು ಬಂದ ಮಾದಿಗ ಸಮಾಜಕ್ಕೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ಸಮಾಜದ ಎಲ್ಲಾ ರಂಗದಲ್ಲೂ ಇಲ್ಲಿಯ ವರೆಗೂ ನ್ಯಾಯ ಪರವಾದ  ಸವಿಂಧಾನ ಬದ್ದ ಹಕ್ಕು ಸಿಕ್ಕಿಲ್ಲ ಎಂದು ಸಿಎಂ ಸಿದ್ದರಾಮಯ್ಯರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ನಂತರ ಮಾತನಾಡಿದ ಯುವ ಮುಖಂಡ ಕೋಗಳಿ ಮಲ್ಲೇಶ್ ಮಾತನಾಡಿ ಕರ್ನಾಟಕದಲ್ಲಿ ಶೋಷಿತ ಸಮಾಜವಾಗಿ ಹಾಗೂ ಅವಕಾಶ ವಂಚಿತ ಮಾದಿಗ ಸಮಾಜದ ಒಳ ಮೀಸಲಾತಿ ಜಾರಿಗಾಗಿ ಅವಿರತ ಹೋರಾಟದ ಫಲವಾಗಿ  ಈ ದೇಶದ ಸರ್ವೋಚ್ಚ ನ್ಯಾಯಾಲಯ 2024 ಆಗಸ್ಟ್01 ರಂದು ಒಳ ಮೀಸಲಾತಿ  ಕಲ್ಪಿಸಿ ಕೊಡುವ  ಅಧಿಕಾರ ಆಯಾ ರಾಜ್ಯಗಳಿಗೆ ಇದೆ ಎಂದು ಐತಿಹಾಸಿಕ ತೀರ್ಪ ನ್ನು  ಆದೇಶಿಸಿದೆ. 

ಇದೊಂದು ದೇಶದ ಅದರಲ್ಲೂ ಕರ್ನಾಟಕ ಮಾದಿಗ ಸಮಾಜದ 30ವರ್ಷಗಳ  ಹೋರಾಟಕ್ಕೆ ನಾಯಸಮ್ಮತವಾದ  ಸಿಕ್ಕ ಜಯ,

ಉದ್ಯೋಗ ಕ್ಷೇತ್ರಗಳಲ್ಲಿ  ನ್ಯಾಯಬದ್ಧ  ಮೀಸಲಾತಿಯಲ್ಲಿ  ಈ ವರೆಗೂ ಆಗಿರುವ ಅನ್ಯಾಯ ಸರಿಪಡಿಸಿ  ಒಳ ಮೀಸಲಾತಿ  ಜಾರಿಮಾಡಿ  ಮಾದಿಗ ಸಮಾಜಕ್ಕೆ  ಸoವಿಧಾನ ಬದ್ದ,ಒಳಮೀಸಲಾತಿ ಕಲ್ಪಿಸಿಕೊಡುವ ಮೂಲಕ ನ್ಯಾಯ ದೊರಕಿಸಿ ಕೊಡಲು  ಆಗ್ರಹಿಸುತ್ತೇವೆ. ಎಂದು ನೂರಾರು ಹೋರಾಟ ಗಾರರ ಆಕ್ರೋಶ ವ್ಯಕ್ತ ಪಡಿಸಿದರು. ಈ ಈ ಹೋರಾಟದಲ್ಲಿ  ಯಡ್ರಾಮನಹಳ್ಳಿ ಮರಿಯಪ್ಪ, ಬೆಣ್ಣಿ ಕಲ್ಲು ಪ್ರಕಾಶ್, ದಶಮಪುರ ಮರಿಯಪ್ಪ,ಪ್ರಭಾಕರ್,ಮದೂರ್ ಮಹೇಶ್, ದುರುಗಪ್ಪ, ಪೂಜಾರ್ ಸಿದ್ದಪ್ಪ, ನಿಂಗಪ್ಪ ಉಪ್ಪಾರ ಗಟ್ಟಿ ಬುಳ್ಳಪ್ಪ, ಲೆಕ್ಕಪ್ಪ, ಭೀಮಪ್ಪ , ಬಾಲಪ್ಪ, ಆನೆಕಲ್ಲು ದುರುಗಪ್ಪ,ತಾಲುಕಿನ ಸುತ್ತ ಮುತ್ತ ಗ್ರಾಮದಿಂದ ಬಂದ ಮಾದಿಗ ಸಮಾಜದ ಮುಖಂಡರು ಯುವಕರು  ಪಾಲ್ಗೊಂಡಿದ್ದರು..


ವರದಿ ರಾಘವೇಂದ್ರ ಸಾಲುಮನೆ ಕೂಡ್ಲಿ

Post a Comment

Previous Post Next Post

Contact Form