ಸಂಕಷ್ಟಗಳನು ಕಳೆಯುವ ಸರ್ವಮಂಗಳೇ ಊರಮ್ಮ.
ಸಂಕಷ್ಟಗಳನು ಕಳೆಯುವ ಸರ್ವಮಂಗಳೇ ಊರಮ್ಮ.
ಕೂಡ್ಲಿಗಿ: ಪಟ್ಟಣದ ಕೋಟೆ ಭಾಗದಲ್ಲಿರುವ ನವ ಶಿಲಾಮಂಟಪದ ಶ್ರೀ ಊರಮ್ಮ ದೇವಸ್ಥಾನವು ಶಕ್ತಿ ಪೀಠವಾಗಿ ಕಂಗೊಳಿಸುತ್ತಿದೆ ಎಂದು ಹಿರೇಮಠದ ಚಿದಾನಂದ ಸ್ವಾಮಿಗಳು ನುಡಿದರು. ಶ್ರೀಊರಮ್ಮ ದೇವಿಯ ದರ್ಶನಕ್ಕೆ ಬಂದ ಭಕ್ತರಿಗೆ ಪ್ರಸಾದ ರೂಪದಲ್ಲಿ ಕ್ವಿಂಟಲ್ ಕಾಲ್ಪಿ ಸಕ್ಕರೆಯನ್ನು ದೇವಸ್ಥಾನಕ್ಕೆ ಅರ್ಪಿಸಿ ಮಾತನಾಡಿದರು. ಪಾಳೇಗಾರರ ಕಾಲದಿಂದಲೂ ಪೂಜಿಸಲ್ಪಟ್ಟ ದೇವಿಯು, ಭಕ್ತರ ಮೊರೆಯನ್ನು ಆಲಿಸುತ್ತಿದ್ದಾಳೆ. ನಿಸ್ವಾರ್ಥ,ನಿಷ್ಕಳಂಕ ಸೇವೆಯನ್ನು ಬಲು ಆನಂದ ದಿಂದ ಸ್ವೀಕರಿಸುತ್ತಾಳೆ ಎಂಬುದಕ್ಕೆ ಅನೇಕ ನಿದರ್ಶನಗಳನ್ನು ಕಂಡಿದ್ದೇನೆ ಎಂದರು. ಪೂಜಾ ವಿಧಿ, ವಿಧಾನಗಳನ್ನು ಪೂರ್ವಜರು ಹೀಗೆ ನೆರವೇರಿಸಿಕೊಂಡು ಬರಬೇಕು ಎಂದು ಲಿಖಿತ ರೂಪದಲ್ಲಿ ಬರೆದಿಟ್ಟು ಹೋಗಿರುವ ಸಂಪೂರ್ಣ ಮಾಹಿತಿ ಇದೆ ಎಂದರು. ೩ಕೋಟಿ ಹಣ ಭಕ್ತಿ ನಿಷ್ಠೆಯಿಂದಲೇ ಹರಿದುಬಂದಿದೆ ಎಂದರೆ, ದೇವಿ ಮಹಿಮೆಯನ್ನು ಕಾಣಬಹುದಾಗಿದೆ. ಮನಸ್ಸು ಮಾಡಿದ್ದರೆ ಕೆಲ ಉಧ್ಯಮಿಗಳು ದೇವಸ್ಥಾನ ನಿರ್ಮಿಸಬಹುದಿತ್ತು. ಆದರೆ, ಹಾಗೇ ಮಾಡುವ ಮನಸ್ಸನ್ನು ದೇವಿ ದಯಪಾಲಿಸಲಿಲ್ಲ. ಶ್ರೀ ಊರಮ್ಮ ದೇವಿಯ ಸದ್ಭಕ್ತರೆಲ್ಲರೂ, ಸಾವಿರದಿಂದಲೂ ಸಹಸ್ರ ರೂಪಾಯಿಗಳವರೆಗೂ ಸೇವೆಯನ್ನು ಬಯಸಿದ್ದಾಳೆ. ಭಕ್ತಿ ಮನಸ್ಸುಗಳಿಂದ ಕಂಗೊಳಿಸುವ ನೂತನ ಶಿಲಾ ಮಂಟಪ ನೆಲೆ ನಿಂತಿರುವುದು ಸಾಕ್ಷಿಯಾಗಿದೆ. ಆಯಗಾರ ಬಣಕಾರ ಮಂಜುನಾಥ ಮಾತನಾಡಿ, ಶ್ರೀ ಊರಮ್ಮತಾಯಿಯ ಹುಂಡಿಯ ಕಾಣಿಕೆಯಿಂದಲೇ, ಪ್ರಾರಂಭವಾದ ದೇವಸ್ಥಾನ ಈ ವರೆಗೂ ಸಾಗಿ ಬಂದು, ಭವ್ಯ ಶಿಲ್ಪಗಳ ಕಲಾ ನೈಪುಣ್ಯತೆಯಲ್ಲಿ ಅರಳಿದ ಗರ್ಭಗುಡಿಯಲ್ಲಿ ಸರ್ವಮಂಗಳ ಮಾಂಗಲ್ಯಯಾಗಿ, ಸರ್ವಭಕ್ತರ ಕಾಯುವ ತಾಯಿಯಾಗಿ ಕರುಣಿಸುತ್ತಿದ್ದಾಳೆ. ಇದಕ್ಕೂ ಮುನ್ನ ಬಂದ ಭಕ್ತರಿಗೆ ಪ್ರಸಾದ ರೂಪದಲ್ಲಿ ಕಾಲ್ಪಿ ಸಕ್ಕರೆಯ ಚೀಲವನ್ನು ಪೂಜಿಸುವುದರೊಂದಿಗೆ, ಕೆಲ ಭಕ್ತರಿಗೆ ಸಿಹಿಯನ್ನು ವಿತರಿಸಲಾಯಿತು. ಕಾಲ್ಪಿ ಸಕ್ಕರೆಯ ಸೇವಾಕರ್ತರಾದ ಕೋಗಳಿ ಮಂಜುನಾಥ ಅವರಿಗೆ ಶ್ರೀಊರಮ್ಮ ದೇವಿಯ ಸನ್ನಿಧಾನದಲ್ಲಿ ಧರ್ಮಕರ್ತ ಚಿದಾನಂದ ಸ್ವಾಮಿಗಳು ಅರ್ಶೀವದಿಸಿದರು. ಹೆಚ್. ವೀರನಗೌಡ್ರು, ಸಣ್ಣ ಕೊತ್ಲಪ್ಪ, ಗ್ರಾಮದೇವತೆ ಅರ್ಚಕ ಬಿ. ಈರಣ್ಣ, ಪಾದಗಟ್ಟೆ ಶ್ರೀಊರಮ್ಮ ದೇವಿ ಅರ್ಚಕ ವೀರಣ್ಣ, ಸ್ಪಂದನ ಗಿರೀಶ್, ಅರ್ಚಕರಾದ ನಾಗರಾಜ್, ವೀರೇಂದ್ರ, ವಿಶ್ವನಾಥ, ಶೆಟ್ರು ಬಸವರಾಜ್, ತಳವಾರ ಸುರೇಶ್, ಸುನೀಲ್ ಗೌಡ, ಉಪನ್ಯಾಸಕ ಕೊಟ್ರಪ್ಪನವರ ನಾಗರಾಜ್, ಬಣಕಾರ ಮೂಗಪ್ಪ ಸೇರಿದಂತೆ ಇತರರಿದ್ದರು
https://youtu.be/z5hdSDR8NXw