ಕೂಡ್ಲಿಗಿ: ಎಪಿಎಂಸಿ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿ ತಡೆಗಟ್ಟುವಂತೆ ಕರ್ನಾಟಕ ರಕ್ಷಣಾ ವೇದಿಕೆ ಜನಸೇನೆ ತಾಲೂಕು ಘಟಕದ ಕಾರ್ಯಕರ್ತರು ತಹಶೀಲ್ದಾರ್ ಎಂ ರೇಣುಕಾ ಅವರಿಗೆ ಮನವಿ ಸಲ್ಲಿಸಿದರು. ಇಲ್ಲಿನ ದಲ್ಲಾಳಿಗಳು ಹಾಗೂ ಮದ್ಯವರ್ತಿಗಳು ರೈತರು ಬೆಳೆದ ಬೆಳೆಗಳಿಗೆ 50 ಕೆ.ಜಿ ಚೀಲಕ್ಕೆ ಸರ್ಕಾರದ ಆದೇಶದಂತೆ 1 ಕೆ.ಜಿ 300 ಗ್ರಾಂ ಮಾತ್ರ ಬಾಜು ಇದ್ದು ಆದರೆ ಇಲ್ಲಿನ ದಲ್ಲಾಳಿಗಳು ಬೇಕಾಬಿಟ್ಟಿಯಾಗಿ ರೈತರಿಂದ 2 ಕೇ.ಜಿ 2.5 ಕೆ.ಜಿ ದಲ್ಲಾಳಿ ಬಾಜನ್ನು ತೆಗೆಯುತ್ತಿದ್ದಾರೆ. ಮತ್ತು ಇಲ್ಲಿನ ದಲ್ಲಾಳಿಗಳು ಮಾರುಕಟ್ಟೆಯನ್ನು ತೆಗೆಯದೆ ರೈತರ ಬಳಿ ಹೋಗಿ ರೈತರು ಬೆಳೆದ ಬೆಳೆಗಳನ್ನು ಖರೀದಿಸುತ್ತಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ತಾವು ಸದರಿ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ತಾಲೂಕು ಯುವ ಘಟಕದ ಅಧ್ಯಕ್ಷ ಜಿ.ಜಗಧೀಶ, ಎಂ.ಮಂಜುನಾಥ, ಗೋವಿಂದ, ಚಕ್ರಪಾಣಿ, ಸಿರಿಬಿ ಮಂಜುನಾಥ, ಗೋವಿಂದಗಿರಿ ಮಹಲಿಂಗ ಸೇರಿದಂತೆ ಇತರರು ಇದ್ದರು.