ಕಾಂಗ್ರೆಸ್ ಪಕ್ಷವು ಸಾವಿರಾರು ಸುಳ್ಳುಗಳನ್ನು ಹೇಳಿ. ಬಡವರಿಗೆ ಹಾಗೂ ರೈತರಿಗೆ ಮತ್ತು ನಿರ್ಗತಿಕರಿಗೆ ಮೋಸವನ್ನು ಮಾಡಿ ಅಧಿಕಾರವನ್ನು ಹಿಡಿದುಕೊಂಡಿದ್ದಾರೆ : ಬಿಜೆಪಿ ರಾಜ್ಯಾಧ್ಯಕ್ಷ,

 ಶಿಗ್ಗಾವ್ ಸವಣೂರು ಉಪಚುನಾವಣೆ ಪ್ರಚಾರಕ್ಕೆ ಇಳಿದ ಬಿಜೆಪಿ ರಾಜ್ಯಾಧ್ಯಕ್ಷ,




   ಇಂದು ಸವಣೂರು ಶಿಗ್ಗಾವ್ ಉಪಚುನಾವಣೆಯ ನಿಮಿತ್ತ ಸವಣೂರು ನಗರದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಭರತ್ ಬೊಮ್ಮಾಯಿವರ ಪರವಾಗಿ ಬಿಜೆಪಿ ರಾಜ್ಯಧ್ಯಕ್ಷರಾದ ಬಿ ವೈ ವಿಜೇಂದ್ರ ಹಾಗೂ ಮಾಜಿ ಸಚಿವರಾದ ಬಿಸಿ ಪಾಟೀಲ್. ಮಾಜಿ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ. ಶಿರಹಟ್ಟಿ ಮತಕ್ಷೇತ್ರದ ಶಾಸಕರಾದ ಚಂದ್ರು ಲಮಾಣಿ. ಬಿಜೆಪಿ ಜಿಲ್ಲಾಧ್ಯಕ್ಷರಾದ ಅರುಣ್ ಕುಮಾರ್ ಪೂಜಾರ್. ಬಿಜೆಪಿ ಪಕ್ಷದ ಮುಖಂಡರಾದ ಶಶಿಧರ್ ಎಲಿಗಾರ. ಭಾರತೀಯ ಜನತಾ ಪಾರ್ಟಿಯ ಸವನೂರು ತಾಲೂಕು ಅಧ್ಯಕ್ಷರಾದ ಹನುಮಂತ ಗೌಡ್ರು ಮುದಿಗೌಡ್ರು. ಇವರೆಲ್ಲರ ನೇತೃತ್ವದಲ್ಲಿ ಇಂದು ಭರತ್ ಬೊಮ್ಮಾಯಿ ಅವರ ಪರವಾಗಿ ಸವಣೂರು ನಗರದ ಪ್ರಮುಖ ರಸ್ತೆ ಬೀದಿಗಳಲ್ಲಿ  ಜಾಂಜ್ ಮೇಳ ಹಾಗೂ ಡೊಳ್ಳು ಕುಣಿತ ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ರೋಡ್ ಶೋ ನಡೆಯಿತು,

 ಈ ಸಂದರ್ಭದಲ್ಲಿ ಸವಣೂರು ನಗರದ ಪ್ರಮುಖ ರಸ್ತೆ ಬೀದಿಗಳಲ್ಲಿ ರೋಡ್ ಶೋ ಮಾಡುವ ಮುಖಾಂತರ ಭರತ್ ಬೊಮ್ಮಾಯಿ ಅವರ ಪರವಾಗಿ ಮತಯಾಚನೆ ಮಾಡುವ ಮುಖಾಂತರ ಸಾರ್ವಜನಿಕರು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯದ್ಯಕ್ಷರಾದ ಬಿ ವೈ ವಿಜೇಂದ್ರ ರವರು ಮಾತನಾಡಿ. ಕಾಂಗ್ರೆಸ್ ಪಕ್ಷವು ಸಾವಿರಾರು ಸುಳ್ಳುಗಳನ್ನು ಹೇಳಿ. ಬಡವರಿಗೆ ಹಾಗೂ ರೈತರಿಗೆ ಮತ್ತು ನಿರ್ಗತಿಕರಿಗೆ ಮೋಸವನ್ನು ಮಾಡಿ ಅಧಿಕಾರವನ್ನು ಹಿಡಿದುಕೊಂಡಿದ್ದಾರೆ.ನಾಡಿನ ರೈತರಿಗೆ ಬೆಳೆ ಹಾನಿ ಆಗಿರಬಹುದು.ಬೆಳೆಯಮೆ ಇರಬಹುದು.ರೈತರು ತೆಗೆದುಕೊಳ್ಳುವಂತ ಸ್ಪಿಂಕ್ಲರ್ ಪೈಪುಗಳಲ್ಲಿ ಹೆಚ್ಚಿನ ಹಣವನ್ನು ತೆಗೆದುಕೊಳ್ಳುವ ಮುಖಾಂತರ ರೈತರಿಗೆ ಅನ್ಯಾಯವನ್ನು ಮಾಡುತ್ತಿದ್ದಾರೆ ಎಂದು ಹೇಳಿ ಸಿದ್ದರಾಮಯ್ಯನವರು ಈ ರಾಜ್ಯದ ಅದೃಷ್ಟ ಮುಖ್ಯಮಂತ್ರಿ ಹೊರತು ಹೋರಾಟ ಮಾಡುವ ಮುಖಾಂತರ ಮುಖ್ಯಮಂತ್ರಿಯೇ ಅಲ್ಲ ಎಂದು ಸಿದ್ದರಾಮಯ್ಯನವರಿಗೆ ತಿರಿಗಿಟು ನೀಡಿದರು,

   ನಂತರ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಭರತ್ ಬೊಮ್ಮಾಯಿ ಅವರು ಮಾತನಾಡಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಜನಪರ ಯೋಜನೆಗಳನ್ನು ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ಹಾಗೂ ಬಸವರಾಜ್ ಬೊಮ್ಮಾಯಿ ಅವರ ಸರ್ಕಾರದಲ್ಲಿ ಜಾರಿಗೆ ಬಂದಿವೆ ಈ ಯೋಜನೆಗಳಿಂದ ಬಡವರು ನೀರ್ಗತಿಕರು ರೈತರು ನಿರುದ್ಯೋಗ ಯುವಕ ಯುವತಿಯರಿಗೆ ಕೆಲಸ ಸಿಗುವಂತೆ ಯೋಜನೆಗಳನ್ನು ತಂದುಕೊಟ್ಟಿದ್ದಾರೆ ಎಂದು ಹೇಳಿದರು, ನಂತರ ಸಿದ್ದರಾಮಯ್ಯನವರು ಈ ಹಿಂದೆ ಶಿಗ್ಗಾವ್ ಸವಣೂರು ಕ್ಷೇತ್ರದಲ್ಲಿ ಒಂದು ಬಡವರಿಗೆ ಮನೆಯನ್ನು ಹಿಂದಿನ ಸರಕಾರದಲ್ಲಿ ನೀಡಿರುವುದಿಲ್ಲ ಎಂದು ಹೇಳಿದ್ದಕ್ಕೆ

ಇದಕ್ಕೆ ಪ್ರತಿ ಉತ್ತರವನ್ನು ಕ್ಷೇತ್ರದ ಜನರ ಬಳಿ ಹೋಗಿ ಜನರನ್ನೇ ಕೇಳಿ ಎಂದು ಸುಮಾರು 12 ಸಾವಿರಕ್ಕಿಂತ ಹೆಚ್ಚು ಮನೆಗಳನ್ನು ಬಡವರಿಗೆ 5 ಲಕ್ಷ ಅನುದಾನದಲ್ಲಿ ಮನೆಯನ್ನು ಕಲ್ಪಿಸಿ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯನವರಿಗೆ ಭಾಷಣದ ಮುಖಾಂತರ ಉತ್ತರವನ್ನು ಕೊಟ್ಟರು,

  ಹಾಗೂ ಮಾಜಿ ಸಚಿವರಾದ ಬಿ ಸಿ ಪಾಟೀಲ್ ಅವರು ಮಾತನಾಡಿದರು, ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರು. ಕಾರ್ಯಕರ್ತರು ಹಾಗೂ ಸವನೂರು ಮತ ಕ್ಷೇತ್ರದ ಸಾರ್ವಜನಿಕರು ಉಪಸ್ಥಿತರಿದ್ದರು,


Post a Comment

Previous Post Next Post

Contact Form