೬ನೇ ಶತಮಾನದ ಊರಮ್ಮ ದೇವಿ ದೇವಸ್ಥಾನ/ ತೊಲೆ,ಕಂಬಗಳಿAದ ನಿರ್ಮಾಣದ ಪುರಾತನ ದೇವಾಲಯ/ ನೂತನ ಶಿಲಾಮಂಟಪ ಶುಕ್ರವಾರ ಲೋಕಾರ್ಪಣೆ.
ಅಶೇಷ ಭಕ್ತರ....ವಿಶೇಷ ದೇವಾಲಯ.
ಕೂಡ್ಲಿಗಿ: ವಿಜಯ ನಗರ ಜಿಲ್ಲೆ ಕೂಡ್ಲಿಗಿ ಪಟ್ಟ ಣದಲ್ಲಿ ನಡೆದ ಊರಮ್ಮ ದೇವಿಯ ಲೋಕಾರ್ಪಣೆ ಮಾಡಲಾಗಿತು.
ಗುಡೇಕೋಟೆ, ಜರ್ಮಲಿ, ವೀರನದುರ್ಗ ಮತ್ತು ಹರಪನಹಳ್ಳಿ ಪಾಳೇಗಾರರು ಕೂಡುವ ಸ್ಥಳ ಕೂಡಲಗಿ, ಕೂಡ್ಲಿಗಿ ಎಂದು ಹೆಸರಾಯಿತು. ಅಂದಿನ ಮ್ಯಾಸ ಬೇಡರ ಹಟ್ಟಿಯಲ್ಲಿ ಕೊತ್ತಲ ಸ್ಥಳದಲ್ಲಿ ಆಂಜನೇಯನನ್ನು ಪ್ರತಿಷ್ಠಾಪಿಸಿ, ಕೊತ್ತಲಾಂಜನೇಯ ದೇವಾಲಯ ನಿರ್ಮಿಸಿ. ಕೋಟೆ ಭಾಗದಲ್ಲಿ ಗ್ರಾಮದೇವತೆ ಶ್ರೀ ಊರಮ್ಮ ದೇವಿಯನ್ನು ಆರಾಧಿಸುವುದರೊಂದಿಗೆ ಕಂಬ, ತೊಲೆಗಳಿಂದ ನಿರ್ಮಿಸಿದ 6 ರಿಂದ 7ನೇ ಶತಮಾನದ ಅವಧಿಯಲ್ಲಿ ನಿರ್ಮಾಣಗೊಂಡ ದೇವಾಲಯದಲ್ಲಿ ನೆಲಸಿದ್ದಳು. ಆಯಗಾರರು ಮತ್ತು ಸದ್ಭಕ್ತರು ಸೇರಿ ನೂತನ ಶಿಲಾ ಮಂಟಪದ ದೇವಾಲಯವನ್ನು ನಿರ್ಮಿಸುವ ಕನಸು, 2024ರಲ್ಲಿ ನನಸಾಗಿದೆ.
ಭವ್ಯ ಶಿಲಾ ಮಂಟಪ: ಚಿಕ್ಕಬಳ್ಳಾಪುರದ ಕಲ್ಲುಗಳನ್ನು ಮುರಗನ್ ಮೇಸ್ತಿç ಮೂಲಕ ಹಡಗಲಿಯ ಸಿಂಗಟಾಲೂರು ವೀರಭದ್ರೇಶ್ವರ ಸ್ವಾಮಿ ಸನಿಹದಲ್ಲಿ ಶಿಲೆಗಳಿಗೆ ಚಿತ್ತಾರ ಮೂಡಿಸುವ ಮೂಲಕ ಭರದಿಂದ ಸಿದ್ಧತೆಯನ್ನು ನಡೆಸಲು ಅಂದಾಜು 3ಕೋಟಿ ರೂ. ಗಳಿಗೆ ತಮಿಳುನಾಡು ಮೂಲದ ಶಿಲ್ಪಿಗಳಿಗೆ ಒಪ್ಪಂದ ಮಾಡಿಕೊಳ್ಳಲಾಯಿತು. ಕಳೆದ ವರ್ಷದಿಂದಲೂ, ಒಂದು ದಿನವೂ ನಿಲ್ಲದೆ, ಸತತ ಪರಿಶ್ರಮದೊಂದಿಗೆ, ದೇವಸ್ಥಾನದ ಲೋಕಾರ್ಪಣೆ ಶುಕ್ರವಾರ ಶ್ರೀಮದ್ ಉಜ್ಜಯನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರು, ಮಹರ್ಷಿ ವಾಲ್ಮೀಕಿ ಮಹಾಸ್ವಾಮಿಗಳು ಕಳಸಾರೋಹಣ ಮುಖೇನ ದೇವಸ್ಥಾನ ಶುಕ್ರವಾರ ಉದ್ಘಾಟನೆಯೊಂದಿಗೆ, ಸಕಲ ಸದ್ಭಕ್ತರಿಗೆ ಶ್ರೀ ಊರಮ್ಮದೇವಿಯು ದರ್ಶನದ ಭಾಗ್ಯವನ್ನು ನೂತನ ಶಿಲಾ ಮಂಟಪದಲ್ಲಿ ರೂಢಳಾಗಿ ಕರುಣಿಸುತ್ತಿದ್ದಾಳೆ. ತಾಲೂಕಿನಲ್ಲಿ ಎಲ್ಲಿಯೂ ಕಾಣ ಸಿಗದ ಅತ್ಯದ್ಭುತ ಶಿಲಾ ಮಂಟಪವು ಕಂಗೊಳಿಸುವoತಾಗಿದೆ.
ಸಕಲ ಸದ್ಭಕ್ತರ ಸೇವಾರ್ಪಣೆ: ತನು,ಮನಗಳೊಂದಿಗೆ, ಗ್ರಾಮ ದೇವತೆ ಶ್ರೀ ಊರಮ್ಮದೇವಿಯ ದೇವಾಲಯಕ್ಕೆ ಒದೊಂದು ಸೇವೆಯನ್ನು ತಾವೇ ಮುಂದೇ ಬಂದು ಮನಃಪೂರ್ವಕವಾಗಿ ಅರ್ಪಿಸುವುದರ ಮೂಲಕ ೩ಕೋಟಿ ರೂ. ಹಣದ ಹೊಳೆ ಹರಿದು ಬಂತು ಎನ್ನುತ್ತಾರೆ ಆಯಗಾರರು. ಸೇರಿದ ಸಭೆಗಳಲ್ಲಿ ಹಣ ಕ್ರೋಢಿಕೂತಗೊಂಡು, ಆ ತಾಯಿಯ ಅಗಾದ ಮಹಿಮೆಯನ್ನು ನೆನೆಯುತ್ತಾ, ಸೇವೆಗೆ ಕಟಿ ಬದ್ಧರಾಗಿ, ಭಕ್ತರು ರಸೀದಿಗಳನ್ನು ಪಡೆಯುವುದರೊಂದಿಗೆ ಸೇವಾ ಸಂಕಲ್ಪಕ್ಕೆ ಮುಂದಾದರು. ಇದರಿಂದ ದೇವಸ್ಥಾನ ನೀವಿಘ್ನವಾಗಿ ಸಾಗಿ ಬಂದು ಲೋಕಾರ್ಪಣೆ ಹಂತದವರೆಗೂ, ತಲುಪಿರುವುದು ಇಂದಿನ ಭಕ್ತರ ಸಕಲ ಸಂಕಲ್ಪವೇ ಸರಿ ಎನ್ನುಬಹುದಾಗಿದೆ.
ಉಭಯ ಶ್ರೀಗಳ ಅರ್ಶೀವಚನ: 48ದಿನಗಳ ಒಳಗೆ ಧರ್ಮಸಭೆಯನ್ನು ನೆರವೇರಿಸುವ ಮೂಲಕ ಸಾರ್ಥಕ ಕಾರ್ಯಕ್ರಮ ನೆರವೇರಿಸಿ. ಬಹುಶಃ ಇಂದಿನ ಶತಮಾನದಲ್ಲಿ ಭಕ್ತಿ ಎಂಬುದು ಕೂಡ್ಲಿಗಿಯಲ್ಲಿ ಕೂಡಿರುವು