ವರದಿ
■ SSLC ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಘದಿಂದ ಉಚಿತ ಟ್ಯೂಷನ್ ಕ್ಲಾಸ್ ಉದ್ಘಾಟನೆ..👍
ಸ್ಥಳ : ವೀರಾಪುರ
ಹೌದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಮಲಪ್ರಭಾ ನದಿ ದಂಡೆಯ ವೀರಾಪುರ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು Sslc ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 3 ತಿಂಗಳ ಟ್ಯೂಷನ್ ಕ್ಲಾಸ್ ಅನ್ನು ಪೂಜ್ಯ ವೀರೇಂದ್ರ ಹೆಗ್ಡೆಯವರ ನೇತೃತ್ವದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಘದ ವತಿಯಿಂದ ಮಹಿಳಾ ಜ್ಞಾನ ವಿಕಾಸ ಯೋಜನಾ ಕಾರ್ಯಕ್ರಮದ ಅಡಿ ಉದ್ಘಾಟನೆ ಮಾಡಲಾಯಿತು. ಈ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕಿತ್ತೂರು ತಾಲ್ಲೂಕು ವಿಸ್ತರಣಾಧಿಕಾರಿ ಸಂದೀಪ್ ನಾಯಕ್ ಹೇಳಿದರು. ಮುಖ್ಯ ಗುರುಗಳು ಆದ ಸವಿತಾ ಕೋಲಕಾರ್, ಗ್ರಾ.ಪಂ ಅದ್ಯಕ್ಶ ಆಲಿ ಸಾಬ್ ಟೆಲ್ಗಡೆ, sdmc ಅಧ್ಯಕ್ಷ ಪ್ರಕಾಶ್ ಬಾಳೆಕುಂದರಗಿ, ಸಹ ಶಿಕ್ಷಕರಾದ ಬಂಕಾಪುರ, ಪಟ್ಟೆದ್, ಕಮ್ಮಾರ ಸರ್ ಹಾಗೂ ಧರ್ಮ ಸ್ಥಳ ಸಂಘದ ಅಧಿಕಾರಿ ಜನಾರ್ದನ, ಶಿಲ್ಪಾ ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಉದ್ಘಾಟನೆ ಗೊಂಡಿತು. ಈ ಸಂದರ್ಭದಲ್ಲಿ ಈ ಕಾರ್ಯಕ್ರಮದ ಬಗ್ಗೆ ನಮ್ಮ ನ್ಯೂಸ್ ಸಮೂಹದೊಂದಿಗೆ ಅಧಿಕಾರಿ ಸಂದೀಪ್ ನಾಯಕ್, sslc ವಿದ್ಯಾರ್ಥಿಗಳು ಹಾಗೂ ಮುಖ್ಯ ಗುರುಗಳು ಆದ ಸವಿತಾ ಕೋಲಕಾರ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಒಟ್ಟಾರೆ sslc ವಿದ್ಯಾರ್ಥಿಗಳ ಫಲಿತಾಂಶ ಉತ್ತೇಜನಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೂಪಿಸಿದ ಈ ಉಚಿತ ಟ್ಯೂಷನ್ ಕ್ಲಾಸ್ ಪೂರಕವಾಗಿದೆ. 👏🌷✒ವಂದನೆಗಳು. ಶ್ರೀ ಬಸವರಾಜು. ರಾಜ್ಯ ಉಪ ಸಂಪಾದಕ. 636022465