ವರದಿ
■ ಗೋಕಾಕ್ ಕರದಂಟು ನಾಡಿನ ಖಡಕ್ ಪೊಲೀಸ್ ಪೊಲೀಸ್ ಅಧಿಕಾರಿ T. B ನೀಲಗಾರ ಇದೇ 30 ರಂದು ನಿವೃತ್ತಿ👍
ಸ್ಥಳ : ಹಿರೇಬಾಗೇವಾಡಿ
ಹೌದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಅದೇಷ್ಟೋ ಅಧಿಕಾರಿಗಳು, ಸಿಬ್ಬಂದಿಗಳು ತನ್ನ ಕೆಲಸ, ಕಾರ್ಯ, ಜ್ಞಾನ ಮತ್ತು ಅಪಾರವಾದ ಪರಿಶ್ರಮದಿಂದ ಪೊಲೀಸ್ ಇಲಾಖೆಯನ್ನು ಇಡೀ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿ ನಿಲ್ಲಿಸಿವೆ. ಇಂತಹವರ ಸಾಲಿನಲ್ಲಿ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿ ಹುಟ್ಟಿದ ಪೊಲೀಸ್ ಅಧಿಕಾರಿಗಳು ಸಹ ಅಷ್ಟೇ ತನ್ನ ಕೆಲಸ, ಕಾರ್ಯ ನಿಷ್ಠೆಯಿಂದ ಹೆಸರು ವಾಸಿಯಾಗಿದ್ದಾರೆ. ಇಂತಹವರ ಸಾಲಿನಲ್ಲಿ ಬರುವವರು ಇದೇ ತಿಂಗಳು 30-11- 2024 ರಂದು ತನ್ನ ಸುದೀರ್ಘ ಪೊಲೀಸ್ ಇಲಾಖೆಯ ಸೇವೆಯಿಂದ ನಿವೃತ್ತಲಾಗಲಿರುವ ಹಾಲಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಆಗಿರುವ ಗೋಕಾಕ್ ಕರದಂಟು ನಾಡಿನ ಮಣ್ಣಿನ ಮಗ ಖಡಕ್ ಪೊಲೀಸ್ ಅಧಿಕಾರಿ ಶ್ರೀ ತುಕರಾಮ ಬಾಬು ನೀಲಗಾರ ಸರ್ ಒಬ್ಬರು. ಅಷ್ಟಕ್ಕೂ ಈ ಖಡಕ್ ಪೊಲೀಸ್ ಅಧಿಕಾರಿ ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಸಿಂದಿಕುರುಬೆಟ್ಟ ಗ್ರಾಮದಲ್ಲಿ ರೈತಾಪಿ ವರ್ಗದ ಕುಟುಂಬಕ್ಕೆ ಕೊನೆ ಮಗನಾಗಿ 14-11-1964 ರಲ್ಲಿ ಜನಿಸಿ ತನ್ನ ಬಾಲ್ಯ ಶಿಕ್ಷಣ ಹಾಗೂ ಮೆಟ್ರಿಕ್ ಶಿಕ್ಷಣವನ್ನು ಗೋಕಾಕ್ ನ್ಯೂಸ್ ಇಂಗ್ಲಿಷ್ ಸ್ಕೂಲ್ ನಲ್ಲಿ ಪೂರೈಸಿ ತದನಂತರ ಪಿ.ಯು.ಸಿ ಯನ್ನು ಮೂಡಲಗಿಯಲ್ಲಿ ಪೂರೈಸುತ್ತಾರೆ. ನಂತರ ಹೊಲದ ರೈತನಾಗಿ ಕೆಲಸ ಮಾಡಿಕೊಂಡು ಪೋಲಿಸ್ ಇಲಾಖೆಗೆ ಅರ್ಜಿಯನ್ನು ಹಾಕುತ್ತಾರೆ. 1986 ರಲ್ಲಿ ಪೊಲೀಸ್ ಇಲಾಖೆಗೆ ನೇಮಕವಾಗಿ ಉತ್ತರ ಕನ್ನಡ ಜಿಲ್ಲೆಯ ಮಾಗವಾಡದ ಪೊಲೀಸ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು 1987 ರಿಂದ ಬೈಲಹೊಂಗಲ ಪೊಲೀಸ್ ಠಾಣೆ, ಟ್ರಾಫಿಕ್ ಪೊಲೀಸ್ ಠಾಣೆ, ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಪಿ.ಸಿ ಯಾಗಿ ಸೇವೆ ಸಲ್ಲಿಸುವುದರ ಜೊತೆಗೆ ತನ್ನ ವ್ಯಾಸಂಗ ಮಾಡಿ ಪದವಿ ಶಿಕ್ಷಣವನ್ನು 1998 ರಲ್ಲಿ ಪೂರೈಸುತ್ತಾರೆ. ನಂತರ ಪಿ.ಎಸ್.ಐ ಆಗಿ ನೇಮಕವಾಗಿ ಬೆಂಗಳೂರು ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಥಮ ಬಾರಿಗೆ ಪಿ.ಎಸ್.ಐ ಆಗಿ ಸೇವೆ ಸಲ್ಲಿಸಿ ನಂತರ ವರ್ಗಾವಣೆಯಾಗಿ ಗುಲಬರ್ಗಾ ಚೌಕ್ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ 2006 ರಲ್ಲಿ ಐಗಳಿ, 2007 ಯಮಕನ ಮರಡಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ, ನಿಪ್ಪಾಣಿ,ಚಿಕ್ಕೋಡಿ,ಖಾನಾಪುರ ಹಾಗೂ ಬೆಳಗಾವಿ ಮಾರ್ಕೆಟ್ ಪೋಲೀಸ್ ಠಾಣೆಗಳಲ್ಲಿ 2014 ರವರೆಗೆ ಸೇವೆ ಸಲ್ಲಿಸುತ್ತಾರೆ. ಇದೇ ಅವಧಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಬೆಳಗಾವಿಯಲ್ಲಿ ನಡೆದಾಗ ಇವರು ಟ್ರಾಫಿಕ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡಿ ಉನ್ನತ ಪೊಲೀಸ್ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. ನಂತರ 2015 ರಲ್ಲಿ ಸಿ.ಪಿ.ಐ ಆಗಿ ಪದೋನ್ನತಿ ಹೊಂದಿ ಬೆಳಗಾವಿಯ ಸಿ.ಓ.ಡಿ ಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಾ ಹುಬ್ಬಳ್ಳಿ ನಾರ್ತ್ ಪೊಲೀಸ್ ಠಾಣೆ, ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆ, ವಿಜಯಪುರದ ಗೊಳ ಗುಮ್ಮಟ ಪೊಲೀಸ್ ಠಾಣೆ, ಬೆಳಗಾವಿ ವಿದ್ಯುತ್ ಕಾರ್ಯಾಚರಣೆ ಪಡೆ ಹಾಗೂ ಅಂಕಲಿ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಣೆ ಮಾಡಿ ದಿನಾಂಕ 30-11-2022 ರಂದು ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ಸಿ.ಪಿ.ಐ ಆಗಿ ವರ್ಗಾವಣೆಯಾಗಿ ಬಂದು ಇಲ್ಲೂ ಸಹ ತನ್ನ ಕಾರ್ಯ ನಿಷ್ಠೆ, ಪ್ರಾಮಾಣಿಕ ಸೇವೆಯಿಂದ ಕಾನೂನು ಬಾಹಿರ ಚಟುವಟುಕೆಗಳನ್ನು ತಡೆಗಟ್ಟುವುದರ ಜೊತೆಗೆ ಅಪಘಾತ ಪ್ರಕರಣಗಳನ್ನು ತಡೆಗಟ್ಟುವುದು ಹಾಗೂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೀಟ್ ಸಿಸ್ಟಮ್ ಅನ್ನು ಸಬಲೀಕರಣ ಮಾಡುವುದರಲ್ಲಿ ಯಶಸ್ಸು ಕಂಡಿದ್ದಾರೆ. ಇದಕ್ಕೆ ಸ್ಪಷ್ಠ ಉದಾಹರಣೆ ಮೊನ್ನೆ ನಡೆದ ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನು ಕೇವಲ ಅರ್ಧ ಗಂಟೆಯಲ್ಲೇ ಹಿಡಿದು ಬಡಿಕೊಳ್ಳಮಠ ರಸ್ತೆಯಲ್ಲಿ ಹಿಡಿದು ಹಿಂಡಲಗ ಜೈಲಿಗೆ ಕೇವಲ ಅರ್ಧ ಗಂಟೆಯಲ್ಲೇ ಕಳಿಸಿದ್ದು ಇವರ ಅದ್ಬುತ ಕಾರ್ಯವನ್ನು ತೋರಿಸುತ್ತದೆ. ಇದೇ ಸಂದರ್ಭದಲ್ಲಿ ಇವರ ಸೇವೆಯನ್ನು ಮನ್ನಿಸಿ ಮುಖ್ಯಮಂತ್ರಿಗಳ ಪದಕಗಳ ಪಟ್ಟಿಗೂ ಇವರ ಹೆಸರು ಶಿಫಾರಸ್ತು ಆಗಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ. ಇನ್ನೂ ಇವರ ವ್ಯಕ್ತಿತ್ವವು ಸಹ ಸ್ನೇಹ ಮನೋಭಾವದಿಂದ ಕೂಡಿದ್ದು ಸೇವಾ ಅವಧಿಯಲ್ಲಿ ಉನ್ನತ ಅಧಿಕಾರಿಗಳ ಸಲಹೆ, ಮಾರ್ಗದರ್ಶನ ವನ್ನು ಪಾಲಿಸುತ್ತಾ, ಸಮಕಾಲೀನ ಅಧಿಕಾರಿಗಳ ಜೊತೆ ಒಳ್ಳೆ ಸ್ನೇಹಿತನಿಗೆ, ಕಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅಚ್ಚು ಮೆಚ್ಚಿನ ಅಧಿಕಾರಿಯಾಗಿ, ಪತ್ರಕರ್ತರ ಜೊತೆಗೂ ಉತ್ತಮ ಒಡನಾಟ ಹೊಂದಿದ್ದ ಇವರು ಇದೇ ಬರುವ 30-11-2024 ರಂದು ತನ್ನ ಸುದೀರ್ಘ ಪೊಲೀಸ್ ಇಲಾಖೆಯ ಸರ್ಕಾರಿ ಸೇವೆಯಿಂದ ನಿವೃತ್ತಿ ಯಾಗುತ್ತಿದ್ದಾರೆ. ಇವರ ನಿವೃತ್ತಿಗೆ ಕೇಕೆ. ಕೊಪ್ಪದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುರೇಶ್ ರಾ.ಕಂಬಿ ಸೇರಿದಂತೆ ಹಲವಾರು ಗಣ್ಯರು ಶುಭ ಹಾರೈಸಿದ್ದಾರೆ. ಆದ್ದರಿಂದ ಇವರ ನಿವೃತ್ತಿ ಜೀವನ ಸುಖಕರಾವಾಗಿರಲಿ ಎಂದು ಹಾರೈಸುತ್ತಾ ಇವರ ಬಗ್ಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಅಭಿನಂದನಾ ಲೇಖನದ ಸಮಗ್ರ ವರದಿ ಪ್ರಕಟ ಮಾಡಿದ್ದಾರೆ. 👏✒🌷ವಂದನೆಗಳು. ಶ್ರೀ ಬಸವರಾಜು. ರಾಜ್ಯ ಉಪ ಸಂಪಾದಕ. 636022465