WPL 2025: ಆರ್ಸಿಬಿಯಿಂದ 7 ಪ್ಲೇಯರ್ಸ್ ಔಟ್..! ತಂಡದಲ್ಲಿ ಉಳಿದವರು ಯಾರ್ಯಾರು ಗೊತ್ತಾ?
WPL Retention 2025: ಐಪಿಎಲ್ ನಂತರ, ಈಗ ಮಹಿಳಾ ಪ್ರೀಮಿಯರ್ ಲೀಗ್‌ನ ಮುಂದಿನ ಸೀಸನ್ಗಾಗಿ ಧಾರಣ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಬಾರಿ ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಮಿನಿ ಹರಾಜು ನಡೆಯುವುದರಿಂದ ಎಲ್ಲ ತಂಡಗಳು ಒಂದಿಷ್ಟು ಆಟಗಾರ್ತಿಯರನ್ನು ಉಳಿಸಿಕೊಂಡಿವೆ. ಕಳೆದ ಆವೃತ್ತಿಯ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಟ್ಟು 7 ಆಟಗಾರ್ತಿಯರನ್ನು ಬಿಡುಗಡೆ ಮಾಡಿದೆ.
ಐಪಿಎಲ್ನಂತೆ, ಮಹಿಳಾ ಪ್ರೀಮಿಯರ್ ಲೀಗ್ನಲ್ಲೂ ಮುಂಬರುವ ಸೀಸನ್ಗಾಗಿ ಸಿದ್ಧತೆ ಆರಂಭವಾಗಿದೆ. ಅದರಂತೆ ಫ್ರಾಂಚೈಸಿಗಳು ತಾವು ತಮ್ಮಲ್ಲೇ ಉಳಿಸಿಕೊಂಡಿರುವ ಆಟಗಾರ್ತಿಯರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಇದರಲ್ಲಿ ಹಾಲಿ ಚಾಂಪಿಯನ್ ಆರ್ಸಿಬಿ ಕೂಡ ಸೇರಿದ್ದು, ಮಿನಿ ಹರಾಜಿಗೂ ಮುನ್ನ ಈ ಫ್ರಾಂಚೈಸಿ 7 ಆಟಗಾರ್ತಿಯರನ್ನು ತಂಡದಿಂದ ಬಿಡುಗಡೆ ಮಾಡಿದ್ದು, ಉಳಿದಂತೆ 14 ಆಟಗಾರ್ತಿಯರನ್ನು ತನ್ನಲ್ಲೇ ಉಳಿಸಿಕೊಂಡಿದೆ.ಆದರೆ ಐಪಿಎಲ್ನಂತೆ ಡಬ್ಲ್ಯುಪಿಎಲ್ನಲ್ಲಿ ಮೆಗಾ ಹರಾಜು ಇರುವುದಿಲ್ಲ. ಬದಲಿಗೆ ಮಿನಿ ಹರಾಜು ಇರಲಿದೆ. ಹೀಗಾಗಿ ಫ್ರಾಂಚೈಸಿಗಳು ಗರಿಷ್ಠ ಆಟಗಾರ್ತಿಯರನ್ನು ತಮ್ಮಲ್ಲೇ ಉಳಿಸಿಕೊಂಡು, ಕೆಲವೇ ಕೆಲವು ಆಟಗಾರ್ತಿಯರನ್ನು ತಂಡದಿಂದ ಕೈಬಿಟ್ಟಿವೆ.
ಬಿಸಿಸಿಐ ನಿಯಮದಂತೆ ಪ್ರತಿ ಫ್ರಾಂಚೈಸಿ 18 ಆಟಗಾರ್ತಿಯರನ್ನು ತಂಡವನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಅದರಲ್ಲಿ 6 ವಿದೇಶಿ ಆಟಗಾರ್ತಿಯರನ್ನು ಕಡ್ಡಾಯವಾಗಿ ಉಳಿಸಿಕೊಳ್ಳಲೇಬೇಕು. ಹೀಗಾಗಿ ಡ್ಯಾನಿ ವ್ಯಾಟ್ ಅವರನ್ನು ಕೆಲವು ದಿನಗಳ ಹಿಂದಷ್ಟೇ ಟ್ರೆಡಿಂಗ್ ಮೂಲಕ ಖರೀದಿಸಿದ್ದ ಆರ್ಸಿಬಿ ಪಾಳದಲ್ಲಿ ವಿದೇಶಿ ಆಟಗಾರ್ತಿಯರ ಸಂಖ್ಯೆ 8 ಕ್ಕೆ ಏರಿತ್ತು. ಆದ್ದರಿಂದ ಆರ್ಸಿಬಿ ಇಂಗ್ಲೆಂಡ್ ತಂಡದ ನಾಯಕಿ ಹೀದರ್ ನೈಟ್ ಮತ್ತು ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ನಡಿನ್ ಡಿ ಕ್ಲರ್ಕ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ.