No title

 ಯರಬಾಳು ರೆಡ್ ಆರ್ಮಿ ತಂಡ ಪ್ರಥಮ, ಕಲರ್ಸ್ ತಂಡಕ್ಕೆ ದ್ವಿತೀಯ ಬಹುಮಾನ(ಕಿಕ್ಕರ್)

ಬೆಟ್ಟಿಂಗ್ ಭೂತಕ್ಕೆ ಬಲೆ ಆಗಬೇಡಿ: ವಾಲ್ಮೀಕಿ ಸಮಾಜದ ಮಹಿಳಾ ಮುಖಂಡರಾದ ವನಜಾಕ್ಷಮ್ಮ ಹೇಳಿದರು.

ಯರಬಾಳು ರೆಡ್ ಆರ್ಮಿ ತಂಡ ಪ್ರಥಮ, ಕಲರ್ಸ್ ತಂಡಕ್ಕೆ ದ್ವಿತೀಯ ಬಹುಮಾನ(ಕಿಕ್ಕರ್)

ಬೆಟ್ಟಿಂಗ್ ಭೂತಕ್ಕೆ ಬಲೆ ಆಗಬೇಡಿ

ಹರಪನಹಳ್ಳಿ: ಇಂದಿನ ಯುವಕರು ಬೆಟ್ಟಿಂಗ್ ಭೂತಕ್ಕೆ ಬಲೆಯಾಗದೆ, ತಂದೆ ತಾಯಿಗೆ ಗೌರವ ತರುವಂತ ಮಕ್ಕಳಾಗಿ ಎಂದು ವಾಲ್ಮೀಕಿ ಸಮಾಜದ ಮಹಿಳಾ ಮುಖಂಡರಾದ ವನಜಾಕ್ಷಮ್ಮ ಹೇಳಿದರು.

ಹರಪನಹಳ್ಳಿ ತಾಲೂಕಿನ ಯರಬಾಳು ಗ್ರಾಮದಲ್ಲಿ ಎರಡು ದಿನ ಹಮ್ಮಿಕೊಂಡಿದ್ದ ಯರಬಾಳು ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪಟ್ಟಣದಲ್ಲಿ ಕೇಳಿ ಬರುತ್ತಿದ್ದ ಜೂಜಾಟದ ಸದ್ದು ಇತ್ತೀಚೆಗಂತು ಹಳ್ಳಿಗಳಿಗೂ ವ್ಯಾಪಿಸಿ ಯುವಕರು ಆನ್ ಲೈನ್ ಜೂಜಿನ ವ್ಯಸನಿಗಳಾಗಿದ್ದಾರೆ. ಇದರಿಂದ ಪೋಷಕರು ಬೆಲೆತೆರಬೇಕಾದ ಸ್ಥಿತಿ ಎಲ್ಲಕಡೆಯೂ ಕಾಣಸಿಗುತ್ತಿದೆ. ಮೊದಲು ಮಕ್ಕಳು ಇಂಥ ಬೆಟ್ಟಿಂಗೆ ದಂಧೆಗೆ ಬಲಿಯಾಗದೆ, ತಂದೆ ತಾಯಿಗೆ ಹೆಸರು ತನ್ನಿ ಎಂದು ಸಲಹೆ ನೀಡಿದರು.

ಗ್ರಾಮದ ಮುಖಂಡ ಪಾಟೀಲ ರಾಜನಗೌಡ್ರು ಮಾತನಾಡಿ, ಗೆಳೆಯರ ಬಳಗದಿಂದ ಪ್ರತಿವರ್ಷ ನಮ್ಮೂರಿನಲ್ಲಿ ಕ್ರಿಕೆಟ್ ಆಟದ ಜತೆ ಈರೀತಿ ಸೇರುತ್ತಿರುವುದು ಖುಷಿ ವಿಚಾರ. ಮುಂದಿನ ದಿನಗಳಲ್ಲಿ ನಮ್ಮೂರಿಗೆ ಕ್ರೀಡಾಂಗಣ ಇಲ್ಲವೆಂಬ ಕೊರಗನ್ನು ಆದಷ್ಟು ಬೇಗ ಪೂರ್ಣಗೊಳಿಸುವ ಕೆಲಸ ಮಾಡೋಣ ಎಂದು ಹೇಳಿದರು.

ಈ ವೇಳೆ ಪತ್ರಕರ್ತ ವಿಷ್ಣು ಯರಬಾಳು, ಗ್ರಾಮ ಪಂಚಾಯಿತಿ ಸದಸ್ಯರಾದ ಮಾರುತಿ ಹರವಿ, ವಿಜಯಕುಮಾರ್ ಅಲಗಿಲವಾಡ, ಗ್ರಾಪಂ ಮಾಜಿ ಅಧ್ಯಕ್ಷ ಗೌಡ್ರ ಮಂಜಪ್ಪ, ಗ್ರಾಮಸ್ಥರಾದ ನಂದ್ಯಾಲ ಶಿವಕುಮಾರ್, ಮಂಜುನಾಥ್ ಕರಿಲಿಂಗಪ್ಪರ, ಗಿರೀಶ್ ಹರವಿ, ಇಟಗಿ ತಿರುಪತೆಪ್ಪ, ಪ್ರಸನ್ನ ಪಲ್ಲಕ್ಕಿ, ಹರೀಶ್ ಅಂಬ್ಲಿ, ಲಂಕಿ ರಮೇಶ್, ಎವಿ ಕಿರಣ್ ಕುಮಾರ್ ಇದ್ದರು. 

--

ರೆಡ್ ಆರ್ಮಿಗೆ ಬಹುಮಾನ

ಎರಡು ದಿನ ನಡೆದ ಪಂದ್ಯಾವಳಿಯಲ್ಲಿ ರೆಡ್ ಆರ್ಮಿ ತಂಡ ಪ್ರಥಮ ಬಹುಮಾನ ಐದು ಸಾವಿರ ಮತ್ತು ಟ್ರೋಫಿ, ಕಲರ್ಸ್ ತಂಡ ದ್ವಿತೀಯ ಬಹುಮಾನ ಎರಡೂವರೆ ಸಾವಿರ ಮತ್ತು ಟ್ರೋಫಿ ತನ್ನದಾಗಿಸಿಕೊಂಡಿತು. ತೃತೀಯ ಸ್ಥಾನ ಪಡೆದ ರಾಜಧಾನಿ ತಂಡ ಟ್ರೋಫಿ ತನ್ನದಾಗಿಸಿಕೊಂಡಿತು.

--

ಹರಪನಹಳ್ಳಿ ತಾಲೂಕಿನ ಯರಬಾಳು ಗ್ರಾಮದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ಗೆಲುವಿನ ನಗೆ ಬೀರಿದ ರೆಡ್ ಆರ್ಮಿ ತಂಡ.


Post a Comment

Previous Post Next Post

Contact Form