ಗ್ರಾಮೀಣ ಭಾಗದ ರಸ್ತೆಗಳಿಗೆ ಪ್ರಗತಿಗೆ ಕಲ್ಯಾಣ ಪಥ ಯೋಜನೆ, ಭೂಮಿ ಪೂಜೆ ಎನ್. ಟಿ ಶ್ರೀನಿವಾಸ್
ಗ್ರಾಮೀಣ ಭಾಗದ ರಸ್ತೆಗಳಿಗೆ ಪ್ರಗತಿಗೆ ಕಲ್ಯಾಣ ಪಥ ಯೋಜನೆ, ಭೂಮಿ ಪೂಜೆ ಎನ್. ಟಿ ಶ್ರೀನಿವಾಸ್
ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಳ್ಳಿಗಳಿಗೆ ಮೂಲ ಸೌಕರ್ಯ, ರಸ್ತೆ ಸಂಪರ್ಕ ಸಮರ್ಪಕವಾಗಿ ಪೂರೈಸಿದರೆ ಅಪಘಾತಗಳನ್ನು ತಪ್ಪಿಸಲು ಕಡಿಮೆ ಮಾಡಬಹುದು ಎಂದು ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ.ಎನ್.ಟಿ ಶ್ರೀನಿವಾಸ್ ಅಭಿಪ್ರಾಯಪಟ್ಟರು. ತಾಲ್ಲೂಕಿನ ಮಾರಬ ಗ್ರಾಮದಲ್ಲಿ ಎ.ಎನ್.ಎಂ ಉಪಕೇಂದ್ರ ಕಾಮಗಾರಿ 65.00 ಲಕ್ಷ, ಬೀರಲಗುಡ್ಡ ಗ್ರಾಮದಿಂದ ಬಡೇಲಡಕು ರಸ್ತೆ ಕಾಮಗಾರಿ ಕಲ್ಯಾಣ ಪಥ ಯೋಜನೆಯಲ್ಲಿ 271.30 ಲಕ್ಷ, ತುಪ್ಪಕನಹಳ್ಳಿ ಯಿಂದ ಅಕ್ಕಾಪುರ ವರೆಗೆ ರಸ್ತೆ ಕಾಮಗಾರಿಗೆ ಕಲ್ಯಾಣ ಪಥ ಯೋಜನೆಯಲ್ಲಿ 489.30 ಲಕ್ಷ, ಹಿರೇಹೆಗ್ದಾಳ್, ಬೊಬ್ಬಲಾಪುರ ಗ್ರಾಮಗಳಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ರಸ್ತೆಗಳಿನ್ನು ಪ್ರಗತಿ ಪಥ ಹಾಗೂ ಕಲ್ಯಾಣ ಪಥ ಎಂಬ ಹೆಸರಿನಲ್ಲಿ ಕರೆಸಿಕೊಳ್ಳಲಿದೆ. ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಈ ಘೋಷಣೆಯನ್ನು ಮಾಡಿದ್ದಾರೆ. ರಾಜ್ಯದಲ್ಲಿ ಪ್ರಗತಿ ಪಥ ಹೆಸರಿನಲ್ಲಿ 7110 ಕಿ.ಮೀ. ಗ್ರಾಮೀಣ ರಸ್ತೆಗಳಿಗೆ 5190 ಕೋಟಿ ರೂ.ಗಳನ್ನು ಖರ್ಚು ಮಾಡಲಾ ಗುತ್ತದೆ. ಇಲ್ಲಿ ಪ್ರಗತಿ ಪಥವಾದರೆ, ನಮ್ಮಲ್ಲಿ ಕಲ್ಯಾಣ ಪಥದಡಿ 1,150 ಕಿ.ಮೀ. ರಸ್ತೆಯನ್ನು 1 ಸಾವಿರ ಕೋಟಿ ರೂ.ಗಳಲ್ಲಿ ಅಭಿವೃದ್ಧಿಪಡಿಸಲಾಗುವುದು. ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸ ಮಾಡುವಾಗ ಜನರ ಸಹಕಾರ ಮುಖ್ಯವಾಗಿರುತ್ತದೆ ಸುಖ ಸುಮ್ಮನೆ ಗುತ್ತಿಗೆದಾರರಿಗೆ ಮತ್ತು ಅಧಿಕಾರಗಳಿಗೆ ತೊಂದರೆ ಮಾಡಬಾರದು ನಿಮ್ಮ ಗ್ರಾಮದ ಕೆಲಸ ಉತ್ತಮ ಅಭಿವೃದ್ಧಿಯತ್ತ ಯೋಚನೆ ಮಾಡಬೇಕು ಅಧಿಕಾರಿಗಳು ಕೂಡ ಯಾವುದೇ ಕೆಲಸವಾಗಲಿ ಉತ್ತಮ ಗುಣಮಟ್ಟವಾಗಿ ಮಾಡಿಸಬೇಕು ಏನಾದರೂ ಅಪ್ಪಿ ತಪ್ಪಿ ಕೆಲಸದಲ್ಲಿ ಹೆಚ್ಚು ಕಡಿಮೆ ಆದರೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು. ಸರ್ಕಾರದ ಬಗ್ಗೆ ವಿರೋಧ ಪಕ್ಷದವರು ಇಲ್ಲದ ಸಲದ ಆರೋಪ ಮಾಡುತ್ತಿದ್ದಾರೆ ಅದರ ಬಗ್ಗೆ ಯಾರು ಕಿವಿ ಕೊಡಬೇಡಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲ್ಯಾಣ ಪಥ ಎಂಬ ಯೋಜನೆ ಸಾಕಷ್ಟು ಅನುದಾನ ಮೀಸಲಿಟ್ಟಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗುರು ಸಿದ್ದನಗೌಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೂಡ್ಲಿಗಿ, ಪಟ್ಟಣ ಪಂಚಾಯತಿ ಅಧ್ಯಕ್ಷ ಕಾವಲಿ ಶಿವಪ್ಪ ನಾಯಕ, ಡಾ.ಷಣ್ಮುಖ ನಾಯಕ್ ವೈದ್ಯ ಅಧಿಕಾರಿಗಳು ವಿಜಯನಗರ, ಡಾ.ಪ್ರದೀಪ್ ತಾಲೂಕು ವೈದ್ಯ ಅಧಿಕಾರಿ, ಮಲ್ಲಿಕಾರ್ಜುನ್ ಎಡಬ್ಲ್ಯೂ, ಕಾಕಿ ಬಸಣ್ಣ, ಗುಪ್ಪಲ್ ರಾಘವೇಂದ್ರ, ಪಟ್ಟಣ ಪಂಚಾಯಿತಿ ಮಾಜಿ ಸಾಯಿ ಸಮಿತಿ ಅಧ್ಯಕ್ಷರು ವೀರಭದ್ರಪ್ಪ, ಬಡೇಲಡಕು ಗ್ರಾಮ ಪಂಚಾಯತಿ ಅಧ್ಯಕ್ಷ ಯು ಮಂಜುಳಾ ಸತೀಶ್, ರಮೇಶ್ ತುಪಕನಹಳ್ಳಿ, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಕರಿಯಣ್ಣ, ಸೇರಿದಂತೆ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಸರ್ವ ಸದಸ್ಯರು, ಮುಖಂಡರು ಇದ್ದರು.
ವರದಿ ರಾಘವೇಂದ್ರ ಸಾಲುಮನೆ ಕೂಡ್ಲಿ ಗಿ