ತಾಲ್ಲೂಕಿಗೊಂದು ಕಾಂಗ್ರೆಸ್ ಭವನ ನಿರ್ಮಾಣ ಮಾಡುವ ಕನಸು : ಶ್ರೀ. ಡಿ.ಕೆ ಶಿವಕುಮಾರ್




 ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾದ   ಶ್ರೀ. ಡಿ.ಕೆ ಶಿವಕುಮಾರ್  ಅವರ ತಾಲ್ಲೂಕಿಗೊಂದು ಕಾಂಗ್ರೆಸ್ ಭವನ ನಿರ್ಮಾಣ ಮಾಡುವ ಕನಸು  ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ನನಸು ಆಗಿದೆ.  ಶ್ರೀ.ಡಿ. ಕೆ ಶಿವಕುಮಾರ್ ನಿರ್ದೇಶನದ  ಮೇರೆಗೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಕ್ಷೇತ್ರದ ಹೆಮ್ಮೆಯ ಶಾಸಕರು, ಮಾತೃ ಹೃದಯಿ ನಾಯಕರು, ಬಡವರ ಬಂಧು, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯ ಹರಿಕಾರರಾದ  ಶ್ರೀಮತಿ.ಎಂ.ಪಿ ಲತಾ ಮಲ್ಲಿಕಾರ್ಜುನ ಅವರ ಮುತುವರ್ಜಿಯಿಂದ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನೂತನ ಕಾಂಗ್ರೆಸ್ ಭವನ ಟ್ರಸ್ಟ್ ಕಛೇರಿ ನಿರ್ಮಾಣದ ನಿವೇಶನ ವನ್ನು ಇಂದು ಹರಪನಹಳ್ಳಿ ಪಟ್ಟಣದ  ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಲಾಯಿತು. 

ಈ ಸಂಧರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ವಿಜಯ ಕೆ ಮುಳಗುಂದು,  ಕೆಪಿಸಿಸಿ ಕಚೇರಿ ಕಾರ್ಯದರ್ಶಿ ಶ್ರೀ ನಾರಾಯಣ ರವರು ಮಾನ್ಯ ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಶ್ರೀ. ಸಿರಾಜ್ ಶೇಖ್  ಜಿಲ್ಲಾ ಉಪಾಧ್ಯಕ್ಷರಾದ ಕೆ.ಎಂ ಹಾಲಪ್ಪ ನವರು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ ಅವರು ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದ ಉಭಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪುರಸಭಾ ಅಧ್ಯಕ್ಷರು,‌ಸದಸ್ಯರು ಸೇರಿದಂತೆ ಅನೇಕು ಜೊತೆಗಿದ್ದರು


Post a Comment

Previous Post Next Post

Contact Form